
ಹೊನ್ನಾವರ – ಪಟ್ಟಣದ ಶರಾವತಿ ಸರ್ಕಲ ಸಮೀಪವಿರುವ ಸಾಯಿ ಕಾಂಪ್ಲೆಕ್ಸ ಸಮೀಪ ಕಳೆದ ಮೂರುದಿನಗಳಿಂದ ನಿಂತಿದ್ದ ತಮಿಳುನಾಡು ನೊಂದಣೆ ಹೊಂದಿದ್ದ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಒಳಗಡೆ ನಿತ್ರಾಣನಾಗಿ ಬಿದ್ದಿದ್ದ ಚಾಲಕನು ಇರುವುದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ಲಾರಿಯ ಒಳಗಿದ್ದ ಚಾಲಕನೇನು ಮೃತಪಟ್ಟಿಲ್ಲದಿದ್ದರೂ ಕೊರೊನಾ ಭಯ ಒಂದಡೆಯಾದರೆ ಲಾರಿ ತಮಿಳುನಾಡು ಮೂಲದ್ದು ಎನ್ನುವುದನ್ನು ತಿಳಿದ ಮಂದಿ ನಿತ್ರಾಣನಾಗಿ ಬಿದ್ದಿರುವ ಚಾಲಕನ ನೆರವಿಗೆ ದಾವಿಸಲು ಮುಂದಾಗಲಿಲ್ಲ.
ಸ್ತಳಕ್ಕೆ ಆಗಮಿಸಿದ ಪಿ.ಎಸ್.ಐ ಶಶಿಕುಮಾರ ಹಾಗೂ ವಾಹನ ಚಾಲಕ ಶಿವಾನಂದ ಚಿತ್ರಗಿ ಕೈಗವಸು ತೊಟ್ಟು ಡ್ರೈವರ್ ಪಕ್ಕದ ಡೋರ್ ತೆಗದು ನೋಡಿದರೆ ಚಾಲಕನ ಕೈ ಕಾಲುಗಳ ಚಲನೆ ಅಷ್ಟೇ ಕಂಡುಬಂದಿತು. ಈತ ಕೊರೊನಾ ಸೋಂಕಿನಿಂದ ನರಳಿಯೇ ಅಶಕ್ತನಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡತೊಡಗಿದರು.ಆದರೂ ಪಟ್ಟಣಪಂಚಾಯತ ಸದಸ್ಯ ಸುರೇಶ ಹೊನ್ನಾವರ ಹಾಗೂ ಟ್ಯಾಕ್ಸಿ ಡ್ರೈವರ್ ಶ್ರೀಕಾಂತ ಮೇಸ್ತ ಪಿ.ಪಿ.ಇ ಕಿಟ್ ಧರಿಸಿ ಅಶಕ್ತ ಚಾಲಕನನ್ನು ಅಂಬುಲೆನ್ಸ್‍ಗೆ ಹತ್ತಿಸಲು ನೆರವಾದರು.
ತಾಲೂಕಾಸ್ಪತ್ರೆಗೆ ಒಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಐಸೋಲೇಷನ್ ವಾರ್ಡನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಗಂಟಲ ದ್ರವದ ಮಾದರಿಯನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲಾರಿ ರಸ್ತೆ ಪಕ್ಕ ನಿಲ್ಲಿಸಿ ಡ್ರೈವರ್ ಮಲಗಿರಬಹುದು ಎಂದು ಸಾರ್ವಜನಿಕರು ತಿಳಿದುಕೊಂಡ ಕಾರಣ ಮತ್ತು ಕ್ಲೀನರ್ ಇಲ್ಲದೇ ಒಬ್ಬರೇ ಲಾರಿಗಳನ್ನು ಚಾಲನೆ ಮಾಡಿಕೊಂಡು ಬಂದಿರುವ ಕಾರಣಕ್ಕೆ ಈ ಘಟನೆ ಎರಡುದಿನ ತಡವಾಗಿ ಬೆಳಕಿಗೆ ಬಂದಿರಬಹುದೆಂದು ಊಹಿಸಲಾಗಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.