
ಮಂಕಿ ; ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿ ‘ಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಟುಂಬದವರೊoದಿಗೆ ಸೇರಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಶಲಾ ಆಡಳಿತ ತಿಳಿಸಿತ್ತು, ಅದರಂತೆ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ಹತ್ತಿರದಲ್ಲಿ ಗಿಡಗಳನ್ನು ನೆಟ್ಟು ಅದರೊಂದಿಗೆ ತೆಗೆದ ಫೋಟೊಗಳನ್ನು ಶಾಲೆಗೆ ಕಳುಹಿಸಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಸೇರಿ ನೂರಾರು ಗಿಡಗಳನ್ನು ನೆಟ್ಟಿರುವುದು ಸಂತೋಷಕರ ವಿಷಯವಾಗಿದೆ. ಇನ್ನೂ ಕೆಲವು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿದ್ದಾರೆ.
ನಮ್ಮ ವಿದ್ಯಾರ್ಥಿಗಳ ಪರಿಸರದ ಬಗೆಗಿನ ಕಾಳಜಿ, ಪ್ರೀತಿ ಮೆಚ್ಚತಕ್ಕದ್ದಾಗಿದೆ. . ಅವೆಲ್ಲದಕ್ಕಿಂತ ಪಾಲಕರು ಅವರೊಂದಿಗೆ ಸೇರಿ ಗಿಡಗಳನ್ನು ನೆಟ್ಟು ‘ವಿಶ್ವ ಪರಿಸರ ದಿನ’ ದ ಆಚರಣೆಯಲ್ಲಿ ಭಾಗಿಯಾಗಿ ಸಾರ್ಥಕಗೊಳಿಸಿದರು ಎಂದು ಶಾಲೆಯ ಮುಖ್ಯಸ್ಥರು ವಾಹಿನಿಗೆ ತಿಳಿಸಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.