May 14, 2024

Bhavana Tv

Its Your Channel

ಹಿರಿಯ ಚಂಡೆವಾದಕರಾದ ದೇವಿ ಗಜಾನನ ಭಂಡಾರಿ ನಿಧನ

ಹೊನ್ನಾವರ: ಹಿರಿಯ ಯಕ್ಷಗಾನದ ಚಂಡೆವಾದಕರು, ಪ್ರಸಾದನಾ ಪರಿಣತರು, ೨೦ ವರ್ಷಗಳ ಕಾಲ ಡಾ.ಶಿವರಾಮ ಕಾರಂತರ ಬಹುಕಾಲಸೇವೆ ಸಲ್ಲಿಸಿದ ಇಡಗುಂಜಿಯ ದೇವಿ ಗಜಾನನ ಭಂಡಾರಿ ಶನಿವಾರ ಮಧ್ಯಾಹ್ನ ಇಡಗುಂಜಿಯ ಸ್ವಗೃಹದಲ್ಲಿ ತಮ್ಮ ೮೦ ನೇ ವರ್ಷದಲ್ಲಿ ನಿಧನರಾದರು. ಮ್ರತರು ೪ ಗಂಡು, ಒಂದು ಹೆಣ್ಣು ಮಕ್ಕಳು ಮತ್ತು ಪತ್ನಿಯರಿದ್ದು, ಅನೇಕ ಅಭಿಮಾನಿಗಳು,ಬಂಧು ಬಳಗವನ್ನ ಅಗಲಿದ್ದಾರೆ.
ತಂದೆಯವರಾದ ಗಜಾನನ ಭಂಡಾರಿಯವರು ಯಕ್ಷಗಾನದ ವೇಷ ಭೂಷಣ ತಯಾರಿಯಲ್ಲಿ ಸಿದ್ದ ಹಸ್ತರಾಗಿದ್ದರು, ಡಾ.ಕಾರಂತರ ಕಲ್ಪನೆಗೆ ಅತ್ಯಂತ ಸೂಕ್ತವಾಗಿ ಸ್ಪಂದಿಸುವ ಸಾಮರ್ಥ್ಯ ಹೊಂದಿದ್ದರು. ಮೃತರ ಹಿರಿಯ ಮಗ ರವಿಶಂಕರ ಕಲಾಪ್ರಿಯರು, ಕಲಾ ಪೋಷಕರಾದರೆ, ಎರಡನೆಯವರಾದ ಭಾಸ್ಕರ ಭಂಡಾರಿ ಚಂಡೆ,ಮದ್ದಲೆ,ನ್ರತ್ಯ ಪರಿಣಿತರಾದ ಮೂರನೆಯ ಮಗ ವಿನಾಯಕ ಭಂಡಾರಿ ಶಹನಾಯ್ ಮತ್ತು ಕೊಳಲು ವಾದಕರು. ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಇಡಿ ಕುಟುಂಬದಲ್ಲಿ ಯಕ್ಷಗಾನ ಕಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೯ ನಲ್ಲಿ ನಮ್ಮ ಗುಣವಂತೆಯ ಯಕ್ಷಾಂಗಣ ದಲ್ಲಿ ಮಂಡಳಿಯ ಅಮ್ರತ ಮಹೋತ್ಸವ ಮತ್ತು ಪ್ರಥಮ ನಾಟ್ಯೋತ್ಸವದಲ್ಲಿ ಇವರು ಪಾಲ್ಗೊಂಡಿದ್ದರು. ಇವರು ಅನೇಕ ಕಲಾವಿದರಿಗೆ ಪ್ರೇರಕರಾಗಿದ್ದರು ಎಂದು ಕೆರಮನೆ ಮೇಳದ ಮುಖ್ಯಸ್ಥರಾದ ಶಿವಾನಂದ ಹೆಗಡೆ ಕೆರಮನೆ ಸೇರಿದಂತೆ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.

error: