March 28, 2025

Bhavana Tv

Its Your Channel

ಭಟ್ಕಳದಲ್ಲಿ ಮಂಗಳವಾರದಿಂದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಭಟ್ಕಳ;2ತಿಂಗಳಿನಿಂದ ಲಾಕ್‍ಡೌನ್ ನಿಂದಾಗಿ ಮುಚ್ಚಲ್ಪಟ್ಟಿರುವ ಭಟ್ಕಳದಲ್ಲಿರುವ ಸುಮಾರು 150ಕ್ಕೆ ಹೆಚ್ಚು ಮಸೀದಿಗಳು ಜೂ.9 ಮಂಗಳವಾರದಿಂದ ಸಾಮೂಹಿಕ ಪ್ರಾರ್ಥನೆಗಾಗಿ ತೆರೆದುಕೊಳ್ಳಲಿವೆ. 

ಈ ಕುರಿತಂತೆ ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಹಾಗೂ ಮರ್ಕಝಿ ಖಲಿಫಾ ಜಮಾಅತ್ ನ ಖಾಝಿಗಳು, ಪದಾಧಿಕಾರಿಗಳು ಹಾಗೂ ಮಜ್ಲಿಸೆ ಇಸ್ಲಾಹ್ ವ-ತಂಝೀಮ್ ಸಂಸ್ಥೆಯ ಮುಖಂಡರೊಂದಿಗೆ ಮಾತುಕತೆ

ದೈಹಿಕ ಅಂತರ ಕಾಪಾಡಿಕೊಳ್ಳುವದರ ಮೂಲಕ ಮನೆಯಿಂದಲೆ ವಝೂ(ಅಂಗಸ್ನಾನ) ಮಾಡಿಕೊಂಡು ಬರಬೇಕು, ತಮ್ಮ ತಮ್ಮ ನಮಾಝ್ ಹಾಸುಗಳನ್ನು ಮನೆಯಿಂದಲೆ ತರಬೇಕು, ಮಸೀದಿ ಕಮಿಟಿಯವರು ಮಸೀದಿಯ ದ್ವಾರದಲ್ಲಿ ಸೆನಿಟೈಸರ್  ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸೂಚನೆಯೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿಯನ್ನು ನೀಡಿಲಾಗಿದೆ ಎಂದು ತಿಳಿಸಲಾಗಿದೆ.

error: