April 18, 2025

Bhavana Tv

Its Your Channel

ಕರೋನಾ ವಾರಿಯರ್ಸ ದೂರವಾಣಿ ಕರೆಗೆ ಕೂಡಲೇ ಸ್ಪಂದಿಸಿದ ಶಾಸಕ ಸುನೀಲ ನಾಯ್ಕ

ಹೊನ್ನಾವರ: ಕರೋನಾ ಸಮಯದಲ್ಲಿ ವಾರಿಯರ್ಸ ರೀತಿಯಲ್ಲಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮಂಗಳವಾರ ತಹಶಿಲ್ದಾರ ಮತ್ತು ಶಾಸಕರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ತಹಶಿಲ್ದಾರ ಮನವಿ ಸಲ್ಲಿಸಿದ ಬಳಿಕ ಭಟ್ಕಳ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕ ವಿಷಯ ತಿಳಿಸಿದಾಗ ನೀವು ಎಲ್ಲಿದ್ದರೂ ಅಲ್ಲಿಯೇ ಬರುತ್ತೇನೆ ಎಂದು ಎಲ್ಲಾ ಕಾರ್ಯ ಬದಿಗೊತ್ತಿ ಶರಾವತಿ ವೃತ್ತದ ಬಳಿಯೇ ಆಗಮಿಸಿ ಮನವಿ ಸ್ವೀಕರಿಸುವ ಮೂಲಕ ಸ್ಪಂದಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

error: