
ಭಟ್ಕಳ: ತಾಲೂಕಿನಲ್ಲಿ ಇಂದು ೯ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೧೩೨ಕ್ಕೆ ಏರಿದೆ. ಇವರಲ್ಲಿ ೫೫ ಮಂದಿ ಈಗಾಗಲೇ ಗುಣಮುಖರಾಗಿದ್ದು, ೭೭ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.ಸೊAಕಿತರು ಮೃತ ನವವಿವಾಹಿತ, ಮೃತ ವ್ರದ್ಧ ಹಾಗೂ ಸೋಂಕಿತ ನರ್ಸ್ ನ ಪ್ರಾಥಮಿಕ ಸಂಪರ್ಕದಿAದ ತಗುಲಿದೆ. ಭಟ್ಕಳಕ್ಕೆ ಬಂದು ಮದುವೆಯಾಗಿ, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದ ಮೃತ ನವವಿವಾಹಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಆರು ಮಂದಿಗೆ ಇಂದು ಸೋಂಕು ದೃಢಪಟ್ಟಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಇನ್ನೋರ್ವ ಭಟ್ಕಳ ಮೂಲದ ೭೯ ವರ್ಷದ ಸೋಂಕಿತ ವೃದ್ಧನ ಪ್ರಾಥಮಿಕ ಸಂಪರ್ಕ ಹಾಗೂ ಭಟ್ಕಳದ ಖಾಸಗಿ ಆಸ್ಪತ್ರೆಯ ನರ್ಸ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೋರ್ವ, ಕೇರಳದಿಂದ ವಾಪಸ್ಸಾಗಿದ್ದ ಮುರುಡೇಶ್ವರದ ೨೬ ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು ೨೧ ಪ್ರಕರಣ ದಾಖಲಾಗಿದ್ದು, ಭಟ್ಕಳ-೯, ಕುಮಟಾ-೩, ಕಾರವಾರ-೨,ಮುಂಡಗೋಡ-೩ ಹಳಿಯಾಳ-೩ ಮತ್ತು ಯಲ್ಲಾಪುರ-೧ ಪ್ರಕರಣ ದಾಖಲಾಗಿದೆ. ಸೋಂಕಿತರ ಸಂಖ್ಯೆ ೩೫೪ ಏರಿದೆ, ಇವರಲ್ಲಿ ೧೫೯ ಮಂದಿ ಗುಣಮುಖರಾಗಿದ್ದು, ೧೯೪ ಸೊಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.