April 5, 2025

Bhavana Tv

Its Your Channel

ಕುಮಟಾ ಅಂಕೋಲಾ ಬಳಿಕ ಹೊನ್ನಾವರದಲ್ಲಿಯೂ ಅರ್ಧ ದಿನ ಸ್ವಯಂಪ್ರೇರಿತ ಲಾಕ್ ಡೌನ್ ನಿರ್ಧಾರ

ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿಯೂ ಬೇರೆ ತಾಲೂಕಿನಂತೆ ಕರೋನಾ ಸೊಂಕು ಹರಡುತ್ತಿರುದರಿಂದ ಸುರಕ್ಷತೆ ಹಾಗೂ ನಿಯತ್ರಂಣಕ್ಕಾಗಿ ಗುರುವಾರದಿಂದ ಮಧ್ಯಾಹ್ನ ೨ರ ನಂತರ ಲಾಕ್ ಡೌನ್ ಜಾರಿ ಮಡುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಬುಧವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಚರ್ಚಿಸಿದ ಬಳಿಕ ಮಾತನಾಡಿ ಕರೋನಾ ತಡೆಯಲು ಸಾರ್ವಜನಿಕರು ಲಾಕ್ ಡೌನ್ ಮಾಡಲು ಸಭೆ ನಡೆಸಿ ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಹಾಗೂ ಮಾಸ್ಕ ಧರಿಸುವ ಮೂಲಕ ಸೊಂಕು ವ್ಯಾಪಿಸದಂತೆ ನೋಡಿಕೊಳ್ಳಬೇಕು. ಇದರ ನಿಯಂತ್ರಣಕ್ಕಾಗಿ ಒಂದು ವಾರ ಮಧ್ಯಾಹ್ನ ಲಾಕ್ ಡೌನ್ ಮಾಡಲಾಗುವುದು ಎಂದರು .
ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ ಭಟ್ಕಳ ಮಾದರಿಯಲ್ಲಿಯೇ ಹೊನ್ನಾವರದಲ್ಲಿಯೂ ಲಾಕ್ ಡೌನ್ ಮಾಡುವ ತಿರ್ಮಾನ ಕೈಗೊಂಡಿದ್ದಾರೆ. ಕರೋನಾ ರೋಗವನ್ನು ದೂರ ಇಡೋಣ ರೋಗಿಯನ್ನು ಬೇಡ. ತುರ್ತು ಅಗತ್ಯವಿರುವ ಕರೋನ್ ಬೆಡ್ ವ್ಯವಸ್ಥೆ ಮಾಡುವ ಸ್ಥಳ ಇದ್ದಲ್ಲಿ ಈಗಾಗಲೇ ಗುರುತಿಸುವ ಕಾರ್ಯ ಮಾಡೊಣ ದಯವಿಟ್ಟು ಆ ಸ್ಥಳ ಗುರುತಿಸಿದಾಗ ವಿರೋಧ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಅಲ್ಲದೇ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಕೆಂದ್ರದ ಕುರಿತು ಹಾಗೂ ಹೋಂ ಕ್ವಾರಂಟೈನ್ ವ್ಯವಸ್ಥೆ , ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಜಿ.ಜಿ.ಶಂಕರ್,
ಬಾಲಕೃಷ್ಣ ಬಾಳೇರಿ, ಹುಸೇನ್ ಖಾದ್ರಿ, ಎಂ.ಜಿ.ನಾಯ್ಕ,ದಾಮೋದರ ಮೇಸ್ತ, ಪಿಎಸೈ ಶಶಿಕುಮಾರ ಮತ್ತು ಅಶೋಕ, ವಿಶ್ವನಾಥ ನಾಯಕ, ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಅಂಗಡಿ ಮಾಲೀಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಗೆ ಆಗಮಿಸಿದ ಪ್ರತಿಯೊರ್ವರನ್ನು ಥರ್ಮಲ್ ಸ್ಕಾನಿಂಗ್ ಮಾಡಿಸುವ ಜೊತೆ, ಸೈನಿಟೈಜರ್ ನಿಯಮ ಪಾಲಿಸಲಾಯಿತು.

error: