April 27, 2024

Bhavana Tv

Its Your Channel

ಭಟ್ಕಳ ಅಥವಾ ಹೊನ್ನಾವರದಲ್ಲಿ ಕೋವಿಡ್ ಪರೀಕ್ಷಾಕೇಂದ್ರವನ್ನು ತೆರೆಯಲು ವ್ಯವಸ್ಥೆ ಮಾಡಬೇಕು-ಸಂತೋಷ ನಾಯ್ಕ, ಅಧ್ಯಕ್ಷರು, ಬ್ಲಾಕ್ ಕಾಂಗ್ರೇಸ್ ಭಟ್ಕಳ.

ಭಟ್ಕಳ : ತಾಲೂಕು ಕೊರೊನ ಸೋಂಕಿನ ಹಾಟ್ ಸ್ಪಾಟ್ ಆಗಿದ್ದು ಪ್ರತಿ ದಿನ ನೂರಾರು ಸಂಖ್ಯೆಯ ಜನರು ಬೇರೆ ಜಿಲ್ಲೆಗಳಿಂದ, ವಿದೇಶಗಳಿಂದ ಭಟ್ಕಳಕ್ಕೆ ಬರುತ್ತಿದ್ದಾರೆ. ಹೊರ ಜಿಲ್ಲೆ ಹಾಗೂ ದೇಶಗಳಿಂದ ಬಂದವರು ಸರಕಾರದ ನಿರ್ದೇಶನದಂತೆ ಕಡ್ಡಾಯವಾಗಿ ಕೊರೊನ ಪರೀಕ್ಷೆಗೆ ಒಳಪಡಬೇಕಾಗಿದ್ದರಿಂದ ಪ್ರತಿ ದಿನ ನೂರಾರು ಜನರು ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವ ನೀಡುತ್ತಾರೆ. ಆದರೆ ಕೋವಿಡ್ ಪರೀಕ್ಷಾ ಲ್ಯಾಬೋರೇಟರಿ ಇರುವುದು ಕಾರವಾರದಲ್ಲಿ. ಪರೀಕ್ಷೆಯ ವರದಿ ಬರಲು ೪ ರಿಂದ ೫ ದಿನಗಳ ಅವಧಿ ಬೇಕಾಗುತ್ತದೆ. ಸ್ವಾಬ್ ಮಾದರಿ ನೀಡಿದ ನಂತರ ಪರೀಕ್ಷೆಗೆ ಒಳಗಾದವರು ಬೇಕಾಬಿಟ್ಟಿ ಎಲ್ಲಿಂದೆಲ್ಲಿ ತಿರುಗಾಡಿ ಸೋಂಕನ್ನು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಕೊರೊನ ಸೋಂಕು ಸಮುದಾಯಕ್ಕೆ ಹರಡುವ ಎಲ್ಲಾ ಸಾಧ್ಯತೆಗಳಿವೆ. ಈ ರೀತಿ ಸೋಂಕು ಸಮುದಾಯಕ್ಕೆ ಹಾರದಂತೆ ತಡೆಯಲು ತ್ವರಿತವಾಗಿ ಕೋವಿಡ್ ಪರೀಕ್ಷಾ ವರದಿ ಸಿಗುವಂತಾಗಿ ಕೋವಿಡ್ ಪೀಡಿತರ ಪತ್ತೆಹಚ್ಚಿ ಚಿಕಿತ್ಸೆ ನೀಡುವಂತೆ ಆಗಬೇಕು. ಹಾಗಾಗಬೇಕು ಅಂದರೆ ಭಟ್ಕಳ ಅಥವಾ ಹೊನ್ನಾವರದಲ್ಲಿ ಕೋವಿಡ್ ಪರೀಕ್ಷಾ ಲ್ಯಾಬೋರೇಟರಿ ತೆರೆಯುವ ಅತೀ ಅವಶ್ಯಕತೆ ಇದೆ. ಕಾರಣ ಭಟ್ಕಳ ಶಾಸಕರು ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಷ್ಟೇ ಗಮನ ಕೊಡದೆ ತುರ್ತು ಅವಶ್ಯಕತೆ ಇರುವ ಕೋವಿಡ್ ಮಹಾ ಮಾರಿ ಸೋಂಕು ನಿಯಂತ್ರಣದ ಬಗ್ಗೆಯೂ ಕೂಡ ಗಮನ ಹರಿಸಿ ಸರಕಾರದ ಗಮನಕ್ಕೆ ತಂದು ಸರಕಾರದ ಮೇಲೆ ಒತ್ತಡಹೇರಿ ಭಟ್ಕಳ ಅಥವಾ ಹೊನ್ನಾವರದಲ್ಲಿ ಕೋವಿಡ್ ಪರೀಕ್ಷಾಕೇಂದ್ರವನ್ನು ತೆರೆಯಲು ವ್ಯವಸ್ಥೆ ಮಾಡಬೇಕು.ಇಲ್ಲವಾದಲ್ಲಿ ಸೋಂಕು ಇಡೀ ಸಮುದಾಯಕ್ಕೆ ಹರಡುವುದನ್ನು ತಡೆಯಲು ಸಾದ್ಯವವಿಲ್ಲ ಎಂಬ ಎಚ್ಚರಿಕೆ ನೀಡುತ್ತಾ ಶಾಸಕರು ಆದಷ್ಟು ಬೇಗ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಸೂಚನೆ ಹಾಗೂ ಒತ್ತಾಯವಾಗಿದೆ ಎಂದು ಸಂತೋಷ್ ನಾಯ್ಕ್.ಅಧ್ಯಕ್ಷರು.ಭಟ್ಕಳ ಬ್ಲಾಕ್ ಕಾಂಗ್ರೆಸ್ ಇವರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.

error: