April 27, 2024

Bhavana Tv

Its Your Channel

ಜಿಲ್ಲೆಯಲ್ಲಿ ೫೦೦ ಗಡಿ ದಾಟಿದ ಕರೋನಾ ಸೊಂಕಿತರ ಸಂಖ್ಯೆ; ಬಿಟ್ಟುಬಿಡದೇ ಕರೋನಾ ವಾರಿಯರ್ಸಗೆ ಅಂಟಿಕೊಳ್ಳುತ್ತಿದೆ ಮಾರಕ ಸೊಂಕು.

ಕಾರವಾರ ; ಜಿಲ್ಲೆಯಲ್ಲಿ ಗುರುವಾರ 23 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ 10 ಮಂದಿ ಕಾರವಾರದವರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಐವರಿಗೆ, ಹೊನ್ನಾವರ ಮತ್ತು ಯಲ್ಲಾಪುರ ತಾಲ್ಲೂಕಿನಲ್ಲಿ ತಲಾ ಇಬ್ಬರಿಗೆ, ಭಟ್ಕಳ, ಶಿರಸಿ, ಮುಂಡಗೋಡ ಹಾಗೂ ಹಳಿಯಾಳ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

ಕಾರವಾರ ತಾಲ್ಲೂಕಿನಲ್ಲಿ ಇಬ್ಬರು ಆರೋಗ್ಯ ಸೇವೆಗಳ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯಾಗಿರುವ 25 ವರ್ಷದ ಯುವಕ ಹಾಗೂ ಮುದಗಾ ನಿವಾಸಿಯಾಗಿರುವ 24 ವರ್ಷದ ಲ್ಯಾಬ್ ಟೆಕ್ನಿಷಿಯನ್‌ ಸೋಂಕಿತರಾಗಿದ್ದಾರೆ. ಸಿದ್ದಾಪುರ ತಾಲ್ಲೂಕಿನಲ್ಲೂ ಆರೋಗ್ಯ ಇಲಾಖೆಯ 56 ಮತ್ತು 59 ವರ್ಷದ ಇಬ್ಬರು ಸಿಬ್ಬಂದಿಗೆ ಕೋವಿಡ್ ಖಚಿತವಾಗಿದೆ.
26, 27 ಹಾಗೂ 28 ವರ್ಷದ ಮೂವರು ಯುವಕರು ಇರಾಕ್‌ನಿಂದ ಮರಳಿ ಕಾರವಾರದ ಹೋಟೆಲ್‌ನಲ್ಲಿದ್ದರು. 43 ವರ್ಷದ ವ್ಯಕ್ತಿಯೊಬ್ಬರು ಅಂಡಮಾನ್ ನಿಕೋಬಾರ್‌ನಿಂದ ಬಂದವರು. ಬೆಂಗಳೂರಿನಿಂದ ಬಂದಿರುವ 21 ಮತ್ತು 27 ವರ್ಷದ ಇಬ್ಬರು ಯುವಕರಿಗೂ ಸೋಂಕು ಖಚಿತವಾಗಿದೆ.

ಸಿದ್ದಾಪುರದಲ್ಲಿ 23 ವರ್ಷದ ಇಬ್ಬರು ಹಾಗೂ 24 ವರ್ಷದ ಒಬ್ಬರು ಯುವತಿಯರೂ ಸೋಂಕಿತರಾಗಿದ್ದಾರೆ. ಕಾರವಾರದ 30 ವರ್ಷದ ಯುವಕ ಹಾಗೂ ಯುವತಿಗೆ, ಯಲ್ಲಾಪುರದ 22 ಮತ್ತು 23 ವರ್ಷದ ಇಬ್ಬರು ಯುವತಿಯರಿಗೆ ಸೋಂಕು ಬಂದಿರುವ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಹೊನ್ನಾವರ ತಾಲ್ಲೂಕಿನ ಹಳದೀಪುರದ ಇಬ್ಬರು ಸೋಂಕಿತರಲ್ಲಿ 45 ವರ್ಷದ ಮಹಿಳೆಯು ಸಂಪರ್ಕಕ್ಕೆ ಬಂದಿದ್ದ 25 ವರ್ಷದ ಯುವಕ ಸೋಂಕಿತರ ಪ್ರಾಥಮಿಕ ಸಂಪರ್ಕವಾಗಿದ್ದಾರೆ.

ಹಳಿಯಾಳದ 60 ವರ್ಷದ ವ್ಯಕ್ತಿಯು ಗೋವಾದಿಂದ, ಭಟ್ಕಳದ 44 ವರ್ಷದ ವ್ಯಕ್ತಿಯು ವಿಜಯವಾಡದಿಂದ ಮರಳಿ ಬಂದವರು. ಮಂಚಿಕೇರಿಯ 43 ವರ್ಷದ ಮಹಿಳೆಯು ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ ನೊಡುವುದಾದರೆ ಇದುವರೆಗೆ 512 ಸೋಂಕಿತರು ಪತ್ತೆಯಾದರೆ 210 ಮಂದಿ ಗುಣಮುಖರಾಗಿದ್ದಾರೆ
300 ಸಕ್ರಿಯ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ೨ ಜನ ಸೊಂಕಿನ ಕಾರಣದಿಂದ ಮೃತಪಟ್ಟಿದ್ದಾರೆ

error: