

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ರ‍್ಭಟ ಮುಂದುವರಿಯುತ್ತಲೇ ಇದೆ. ಇಂದು ೨೨೮೨ ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೩೧,೧೫೯ ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು ೧೭ ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ ೪೮೭ ಕ್ಕೇರಿದೆ.
ರಾಜ್ಯ ರಾಜಧಾನಿಯನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತೀ ಹೆಚ್ಚಿನ ೧೩೭೩ ಕೋವಿಡ್ ೧೯ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ರಾಜಧಾನಿಯಲ್ಲಿ ಸೋಂಕಿನ ರ‍್ಭಟ ಮಿತಿ ಮೀರುತ್ತಿದೆ. ಉಳಿದಂತೆ ದಕ್ಷಿಣ ಕನ್ನಡ, ಕಲಬುರಗಿ, ಧಾರವಾಡ, ಮೈಸೂರು, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಅತೀ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಒಟ್ಟಾರೆಯಾಗಿ ಇದುವರೆಗೆ ೪೮೬ ಜನ ಕೋವಿಡ್ ೧೯ ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಹಾಗೂ ೪ ಜನ ಕೋವಿಡ್ ೧೯ ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. ೪೫೭ ಸೋಂಕಿತರು ತರ‍್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇಂದು ದಾಖಲಾದ ಕೊರೊನಾ ಪ್ರಕರಣಗಳನ್ನು ಜಿಲ್ಲಾವಾರು ನೋಡುತ್ತ ಹೋದರೆ ಬೆಂಗಳೂರು ೧,೩೭೩, ದಕ್ಷಿಣಕನ್ನಡ ೧೬೭, ಕಲಬುರಗಿ ೮೫, ಧಾರವಾಡ ೭೫, ಮೈಸೂರು ೫೨, ಬಳ್ಳಾರಿ ೪೧, ದಾವಣಗೆರೆ ೪೦, ಶಿವಮೊಗ್ಗ ೩೭, ಬಾಗಲಕೋಟೆ ೩೬, ಕೋಲಾರ ೩೪, ಚಿಕ್ಕಬಳ್ಳಾಪುರ ೩೨, ತುಮಕೂರು ೨೭, ಮಂಡ್ಯ ೨೪, ಉತ್ತರಕನ್ನಡ ೨೩, ಉಡುಪಿ ೨೨, ಹಾಸನ ೨೧, ಹಾವೇರಿ ೧೮, ರಾಮನಗರ ೧೭, ರಾಯಚೂರು ೧೬, ಯಾದಗಿರಿ ೧೬, ಬೆಂಗಳೂರು ಗ್ರಾಮಾಂತರ ೧೬, ಬೀದರ್ ೧೫, ಚಾಮರಾಜನಗರ ೧೨, ಬೆಳಗಾವಿ ೯, ಗದಗ ೬, ಚಿಕ್ಕಮಗಳೂರು ೦೫, ಕೊಡಗು ೪, ಕೊಪ್ಪಳ ೨, ಚಿತ್ರದರ‍್ಗ ೦೨, ವಿಜಯಪುರ ೦೧ ಸೋಂಕಿನ ಪ್ರಖರಣಗಳು ಪತ್ತೆಯಾಗಿವೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.