April 27, 2024

Bhavana Tv

Its Your Channel

ಭಟ್ಕಳ ತಾಲೂಕಿನ ಗಡಿಭಾಗಗಳಾದ ಶಿರೂರು, ಕುಂಟವಾಣಿ ಮತ್ತು ಶಿರಾಲಿ ಚೆಕ್ ಪೋಷ್ಟಗಳಲ್ಲಿ ಭಟ್ಕಳಕ್ಕೆ ಒಳ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಿ ಕಳುಹಿಸಿಕೋಡಲಾಗುತ್ತಿದೆ.

ಭಟ್ಕಳ : ಪಟ್ಟಣದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜು.೧೦ರಿಂದ ಭಟ್ಕಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಜು ೧೦ರಿಂದ ಶಿರೂರು ಮತ್ತು ಶಿರಾಲಿ ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅವರ ಹಿನ್ನಲೆ ವಿಚಾರಿಸಿ ದೂರವಾಣಿ ಸಂಖ್ಯೆ ಪಡೆದು ಕಳುಹಿಸಲಾಗುತ್ತಿದೆ.

Sunil Naik MLA. Bhatkal


ತಾಲೂಕಿನಲ್ಲಿ ಒಂದು ವಾರದಿಂದ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗುತ್ತಿದ್ದು, ಅದಕ್ಕೆ ಎರಡು ದಿನ ದಿಂದ ಬ್ರೇಕ್ ಬಿದ್ದಿದೆ. ಯಾವುದೇ ಪ್ರಕರಣ ಪತ್ತೆಯಾಗಿಲ್ಲವಾಗಿದೆ. ಭಟ್ಕಳದ ಜನತೆ ಒಂದು ವಾರದಿಂದ ತಾಲೂಕಿನಲ್ಲಿ ಹೆಚ್ಚುತ್ತಿದ್ದ ಕೊರೊನ ಸೋಂಕಿನಿAದ ಭಯಭೀತರಾಗಿದ್ದರು. ಸ್ವಲ್ಪಮಟ್ಟಿಗೆ ನೆಮ್ಮದಿಯ ನೆಟ್ಟುಸಿರು ಬಿಟ್ಟಿದ್ದಾರೆ. ಭಟ್ಕಳದಲ್ಲಿ ಗುರುವಾರ ಒಂದು ಪ್ರಕರಣ ಪತ್ತೆಯಾಗಿದ್ದು ಶುಕ್ರವಾರ ಒಂದೆ ಒಂದು ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಆಸ್ಪತ್ರೆಯ ಮೂಲದ ಪ್ರಕಾರ ತಾಲೂಕಿನ ಸುಮಾರು ೫೦೦ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು ವರದಿ ಬರಬೇಕಿದೆ. ಹಲವು ಸೋಂಕಿತರ ಸ್ಯಾಂಪಲಗಳನ್ನು ಮಂಗಳೂರು ಕಳುಹಿಸಿಕೋಡಲಾಗಿದೆ ಎನ್ನಲಾಗಿದೆ.

error: