
ಕಾರವಾರ: ಕಂದಾಯ ಇಲಾಖೆಯಲ್ಲಿ ಕಳೆದ ೪೩ ವರ್ಷಗಳಿಂದ ಸೇವಾ ಭದ್ರತೆ ಇಲ್ಲದೇ, ಕನಿಷ್ಟವೇತನ ಪಡೆಯುತ್ತಿದ್ದು ಇದರಿಂದ ಕುಟುಂಬ ನಿರ್ವಹಣೆಯು ಕಷ್ಟಸಾಧ್ಯವಾಗಿದೆ. ಕರ್ನಾಟಕ ಆಡಳಿತ ಮಂಡಡಳಿಯ ಡಿ ಗ್ರೂಪ್ ದರ್ಜೆಯ ನೌಕರರನ್ನಾಗಿಸುವಂತೆ ಹಲವು ಬಾರಿ ಈ ಹಿಂದೆಯೂ ಮನವಿ ನೀಡಲಾಗಿದೆ. ಸಚೀವ ಸಂಪುಟದ ಉಪ ಸಮೀತಿ ಮನವಿ ನೀಡಿದೆ. ಸರ್ಕಾರದ ಉನ್ನತ ಅಧಿಕಾರಿಗಳ ಸಮೀತಿಯು ಶಿಫಾರಸ್ಸು ಮಾಡಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ವರದಿ ಮಾಡಿದ್ದಾರೆ. ರಾಜ್ಯ ಅಡ್ವೋಕೇಟ್ ಜನರಲ್ ವರದಿಯಲ್ಲಿಯೂ ಉಲ್ಲೇಖವಾಗಿದೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ. ಕೋವಿಡ್ ೧೯ ಸಂದರ್ಭದಲ್ಲಿ ರಾತ್ರಿ ಹಗಲು ಎನ್ನದೇ ಸೇವೆ ಸಲ್ಲಿಸುತ್ತಿದ್ದೇವೆ, ಈ ಸಂದರ್ಭದಲ್ಲಿ ರಾಜ್ಯದ ಹಲವಡೆ ಗ್ರಾಮ ಸಹಾಯಕರ ಮೇಲೆ ಹಲ್ಲೆ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಯಾವುದೇ ವಿಶೇಷ ಸೌಲಭ್ಯಗಳಿಲ್ಲ. ಇದನ್ನು ಮನಗಂಡು ನಮ್ಮ ಬೇಡಿಕೆಗಳಾದ ಸೇವೆಯನ್ನು ಖಾಯಂಗೊಳಿಸಿ ಕನಿಷ್ಟ ವೇತನ ನಿಗಧಿಗೊಳಿಸಬೇಕು. ವೈದ್ಯಕೀಯ ಸೌಲಭ್ಯದ ಜೊತೆ ಕೋವಿಡ್ ವಿಮಾ ಸೌಲಭ್ಯ ನೀಡಬೇಕು. ಚೆಕ್ ಪೋಸ್ಟ ಕತ್ಯರ್ವದಲ್ಲಿದ್ದಾಗ ಹಲ್ಲೆ ಆಗದಂತೆ ಸೂಕ್ತ ಭದ್ರತೆ ನೀಡುವ ಜೊತೆ ಹಲ್ಲೆ ಮಾಡಲು ಮುಂದಾದವರಿಗೂ ಕಠಿಣ ಶಿಕ್ಷೆ ನೀಡಬೇಕು. ತಾಲೂಕ ಕಛೇರಿಯ ರಾತ್ರಿ ಪಾಳಿಯ ಕೆಲಸಕ್ಕೆ ಬಳಸಿಕೊಳ್ಳದಂತೆ ಸೂಚಿಸಬೇಕು. ವಿನಾಕಾರಣ ಗ್ರಾಮ ಸಹಾಯಕರಿಗೆ ಕತ್ಯರ್ವದಿಂದ ವಜಾ ಮಾಡಬಾರದು. ಈ ಮೇಲಿನ ಬೇಡಿಕೆ ಒಂದು ವಾರದೊಳಗೆ ಬಗೆಹರಿಯದೇ ಹೋದಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಕೆಲಸ ಸ್ಥಗಿತಗೊಳಿಸಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಕಾರವಾರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಹರೀಶ ಕುಮಾರ್ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಸಹಾಯಕ ಸಂಘದ ಉಪಧ್ಯಕ್ಷ ದೇವೆಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ರೇಷ್ಮಾ ಫರ್ನಾಂಡೀಸ್, ಯಾದು ಬೀರಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.