May 19, 2024

Bhavana Tv

Its Your Channel

ಗುರುವಾರ ಹೊನ್ನಾವರಕ್ಕೆ ಶಾಕ್ ೨೩ ಪ್ರಕರಣ ಪತ್ತೆ. ೩ ಮಹಿಳೆ ೨೦ ಪುರುಷರಲ್ಲಿ ಸೋಂಕು ದೃಡ

ಹೊನ್ನಾವರ: ಬುಧವಾರ ಒಂದು ಪ್ರಕರಣವಿಲ್ಲದೆ ತಾಲೂಕಿನ ಜನತೆ ನಿಟ್ಟುಸಿರು ಬಿಡುವಷ್ಟರಲ್ಲೆ, ಗುರುವಾರ ೨೩ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಶಾಕ್ ಕೊಟ್ಟಿದೆ. ಹೆಚ್ಚಿನವರು ಹೊರ ಜಿಲ್ಲೆಯಿಂದ ಆಗಮಿಸಿದ್ದರೆ, ಇನ್ನು ಕೆಲವರು ಸೋಂಕಿತರ ಸಂಪರ್ಕದಿoದಲೇ ಬಂದಿದೆ ಎನ್ನಲಾಗುತ್ತಿದೆ. ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣ ಪತ್ತೆಯಾಗಿದ್ದು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಕರಾವಳಿ ಕಾವಲು ಪಡೆಯ ೫೮,೩೯,೪೦,೪೩,೩೩,೩೬ ವರ್ಷದ ಪುರುಷರಿಗೆ ಸೊಂಕು ದೃಡವಾಗುವ ಮೂಲಕ ಹೆಚ್ಚು ಪ್ರಕರಣ ಒಂದೇ ಭಾಗದಲ್ಲಿ ಪತ್ತೆಯಾಗಿದೆ. ಇನ್ನು ಐ.ಆರ್.ಬಿ ಕಾರ್ಯ ನಿರ್ವಹಿಸುತ್ತಿದ್ದ ೩೭ ವರ್ಷದ ಪುರುಷ ಹಾಗೂ ೨೧ ವರ್ಷದ ಪುರುಷನಲ್ಲಿ ಸೊಂಕು ದೃಡವಾಗಿದೆ. ಪಟ್ಟಣ ಭಾಗದಲ್ಲಿ ಬಂದರರೋಡ್ ೨೫ ವರ್ಷದ ಪುರುಷ, ರಾಯಲಕೇರಿ ೩೮ ವರ್ಷದ ಪುರುಷ ಪ್ರಭಾತನಗರದ ಗಾಂಧಿನಗರದ ೪೫ ವರ್ಷದ ಮಹಿಳೆಯಲ್ಲಿಯೂ ಸೊಂಕು ಧೃಡವಾಗಿದೆ. ಗ್ರಾಮೀಣ ಭಾಗದತ್ತ ನೋಡುವುದಾದರೆ, ಸಾಲ್ಕೋಡ್ ಗ್ರಾಮದ ೨೫,೨೯,೩೨ವರ್ಷದ ಪುರುಷರಲ್ಲಿ ಸೋಂಕು ದೃಡವಾಗಿದ್ದು, ವಲ್ಕಿಯ ೨೯,೩೬ವರ್ಷದ ಪುರುಷರಲ್ಲಿ, ಅಳ್ಳಂಕಿಯ ಹರಿಜನಕೇರಿಯ ೨೧ವರ್ಷದ ಪುರುಷ, ಅನಿಲಗೋಡ್ ೨೬ ವರ್ಷದ ಪುರುಷ, ಹಡಿನಬಾಳ ಕಳಲಕೇರಿಯ ೧೯ ವರ್ಷದ ಪುರುಷ, ಹಳದೀಪುರದ ಜೋಗಿನಕಟ್ಟೆಯ ೩೨ ವರ್ಷದ ಪುರುಷ, ಚಂದಾವರ ತಲಗೇರಿಯ ೪೬ವರ್ಷದ ಪುರುಷ, ಹೊದಿಕೆ ಶಿರುರಿನ ೨೯ ವರ್ಷದ ಮಹಿಳೆ, ಕಡ್ಲೆಯ ೩೮ ವರ್ಷದ ಮಹಿಳೆಯಲ್ಲಿ ಕರೋನಾ ಪಾಸಟಿವ್ ಬಂದಿದ್ದು, ಸಂಜೆಯ ಹೆಲ್ತ ಬುಲೆಟಿನ್ ವೇಳೆಗೆ ಕ್ವಾರಂಟೈನ್ ಇದ್ದವರು ಎಷ್ಟು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಹೊನ್ನಾವರದಲ್ಲಿ ಇಂದಿನ ೨೩ ಸೇರಿ ೮೩ ಸೊಂಕಿತರು ಪತ್ತೆಯಾಗಿದ್ದು, ೩೦ ಜನರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಪ್ರಕರಣ ಬೆಳಕಿಗೆ ಬರುತ್ತಿರುದರಿಂದ ತಾಲೂಕಿನ ಜನತೆ ಈಗಾಲಾದರೂ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

error: