May 15, 2024

Bhavana Tv

Its Your Channel

ಇಹಲೋಕದಿಂದ ವಿದಾಯ ಹೇಳಿದ ಭಟ್ಕಳದ ಚೀಫ್‌ಖಾಝಿ ಮೌಲಾನ ಮುಲ್ಲಾಇಕ್ಬಾಲ್ ನದ್ವಿ

ಭಟ್ಕಳ: ಶಾಪಿ üಕರ್ಮ ಶಾಸ್ತçದಲ್ಲಿ ಪಾಂಡಿತ್ಯ ಸಾಧಿಸಿದ್ದ ದಕ್ಷಿಣ ಭಾರತದ ಪ್ರಮುಖ ವಿದ್ವಾಂಸರಲ್ಲೋರ್ವರಾಗಿರುವ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ನ ಪ್ರಧಾನ ಖಾಝಿ ಮೌಲಾನ ಮುಲ್ಲಾಇಕ್ಬಾಲ್ ನದ್ವಿ(೭೫) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗುವುದರ ಮೂಲಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ.
ಕಳೆದ ಒಂದು ತಿಂಗಳಿAದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ದೃಢಪಡಿಸಿವೆ.
ಇಬ್ಬರು ಪತ್ನಿಯರನ್ನು ಹೊಂದಿದ ಇವರು, ಮೊದಲ ಪತ್ನಿಯ ಮರಣದ ನಂತರ ಎರಡನೇ ಮದುವೆಯಾಗಿದ್ದರು.ಇಬ್ಬರು ಪತ್ನಿಯರಿಂದ ೮ ಪುತ್ರಿಯರು ಇಬ್ಬರು ಪುತ್ರರನ್ನು ಹೊಂದಿದ್ದಾರೆ.
ಶಾಫಿ ಕರ್ಮ ಶಾಸ್ತçದಲ್ಲಿ ಪಾಂಡಿತ್ಯವನ್ನು ಹೊಂದಿದ್ದ ಇವರು ಅಸ್ಟೊçÃನೋಮಿ ವಿದ್ಯೆಯನ್ನು ಕಲಿತಿದ್ದರು. ಆಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಸಮುದಾಯದ ಅಪಾರ ಸೇವೆಯನ್ನುಗೈದಿರುವ ಇವರು ಬಾಲಕೀಯರಿಗಾಗಿ ಕುರ್‌ಆನ್ ಕಂಠಸ್ಥ (ಹಿಫ್ಝ್) ತಹಫಿಝುಲ್‌ಕುರ್‌ಆನ್ ಸಂಸ್ಥೆಯನ್ನು ನಡೆಸುತ್ತಿದ್ದರು. ಮಹಿಳೆಯರ ಶಿಕ್ಷಣ ಸಂಸ್ಥೆಯಾಗಿರುವ ಜಾಮಿಯತುಸ್ಸಾಲಿಹಾತ್ ನಲ್ಲಿಯೂ ಇವರು ಆರಂಭದಿAದಲೆ ತಮ್ಮನ್ನು ತೊಡಗಿಸಿಕೊಂಡಿದ್ದರು.
ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಖಾಝಿಮುಹಮ್ಮದ್ ಆಹ್ಮದ್ ಖತೀಬ್‌ರವರ ನಿಧನದಿಂದ ತೆರವಾಗಿರುವ‘ ಪ್ರಧಾನಖಾಝಿ’ ಹುದ್ದೆಯನ್ನು ಮೌಲಾನಇಕ್ಬಾಲ್ ನದ್ವಿಯವರು ಜುಲೈ ೨೦೦೯ ಅಲಂಕರಿಸಿದ್ದರು. ಇವರು ತಮ್ಮ ಹುದ್ದೆಯಲ್ಲಿರುವಾಗ ಅನೇಕಾರು ಕೌಟುಂಬಿಕ ವ್ಯಜ್ಯಗಳನ್ನು ಬಗೆಹರಿಸಿದ್ದಾರೆ. ಅಲ್ಲದೆ ಅನುವಂಶಿಕ ಸಂಪತ್ತಿನ ವಿತರಣೆಯ ಸಮಸ್ಯೆಯನ್ನುಅತ್ಯಂತ ಸುಲಭವಾಗಿ ಬಗೆಹರಿಸುತ್ತಿದ್ದರು.ನಮಾಝ್ ಸಮಯವನ್ನು ತಿಳಿಸುವ ಸಾಫ್ಟವೇರ್(ತಂತ್ರಾAಶವನ್ನು) ಇವರು ಅಭಿವೃದ್ಧಿ ಪಡಿಸಿದ್ದರು ಅಕ್ಷಾಂಶ ಮತ್ತು ರೇಖಾಂಶಗಳ ಕುರಿತಂತೆ ಅಗಾಧ ಜ್ಞಾನವನ್ನು ಪಡೆದುಕೊಂಡಿದ್ದರು. ಭಟ್ಕಳದ ಯುವಕರಲ್ಲಿ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಹಾಗೂ ಜನರು ಪರಸ್ಪರ ಸೌಹಾರ್ಧತೆಯಿಂದ ಬದುಕು ಸಾಗಿಸುವಲ್ಲಿ ಇವರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದರು.ಯಾವುದೇಒಂದು ಪಂಗಡಕ್ಕೆ ಅಂಟಿಕೊಳ್ಳದೆ ಸಮುದಾಯದ ಎಲ್ಲ ಪಂಗಡ ಮತ್ತು ವಿಚಾರಧಾರೆಯವರೊಂದಿಗೆ ಬೆರೆತು ಸಮುದಾಯದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಸಕ್ರೀಯರಾಗಿದ್ದರು.
೧೯೬೭ ರಲ್ಲಿ ಭಟ್ಕಳದ ಜಾಮಿಯಾಇಸ್ಲಾಮಿಯ ಶಿಕ್ಷಣ ಸಂಸ್ಥೆಯಿAದ ಪದವಿ ಪಡೆದು ನಂತರ ದಾರುಲ್‌ಉಲೂಮ್ ನದ್ವತುಲ್‌ಉಲೇಮಾ ದಿಂದ ಪದವಿಯನ್ನು ಪಡೆದುಕೊಂಡಿದ್ದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ “ಆದಿಬ್ ಕಾಮಿಲ್” ಪದವಿಯನ್ನು ಪಡೆದುಕೊಂಡಿದ್ದಾರೆ ಭಟ್ಕಳದ ಫಾರೂಖಿ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಇಮಾಮ್ ಆಗಿಯೂ ಕಾರ್ಯನಿರ್ವಹಿಸಿದ ಇವರು ಇಸ್ಲಾಮಿಯಾ ಆಂಗ್ಲೋಉರ್ದು ಪ್ರೌಢಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆಸಲ್ಲಿಸಿದ್ದಾರೆ. ಅಜ್ಕಾರ್-ಎ- ಹಜ್ ಮತ್ತುಉಮ್ರಾ, ಹಾಗೂ ತಖ್ರೀಝ್ ವಕ್ತ್ ಸಲಾತ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ.
ಇವರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅಲ್ಲಾಹನು ಇವರಿಗೆ ಮಗ್ಫಿರತ್ ನೀಡಲಿ(ಆಮೀನ್).
ಇವರ ನಿಧನಕ್ಕೆ ತಂಝೀಮ್ ಸಂಸ್ಥೆ, ಅಂಜುಮನ್, ತರಬಿಯತ್ ಎಜ್ಯುಕೇಶನ್ ಸೂಸೈಟಿ, ಜಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ, ಜಮಾಅತೆಇಸ್ಲಾಮಿ ಹಿಂದ್ ಸೇರಿದಂತೆ ಅನೇಕಾ ಸಂಘಸAಸ್ಥೆಗಳ ಮುಖ್ಯಸ್ಥರು ಶೋಕವನ್ನು ವ್ಯಕ್ತಪಡಿಸಿದ್ದು ಮೃತರಆತ್ಮಕ್ಕೆಅಲ್ಲಾಹನು ಮಗ್ಫಿರತ್ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


error: