
ಭಟ್ಕಳ: ಅಬಕಾರಿ ಇಲಾಖೆಯವರು ಕೊರೊನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಕೈಗೊಂಡ ಕಾರ್ಯಾಚರಣೆಯಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಇಲಾಖೆ ದಾಳಿ ಮಾಡಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಸಾಗರ ರಸ್ತೆಯ ಅರಣ್ಯ ಇಲಾಖೆಯ ಜಾಗಾದಲ್ಲಿ ನಾಶ ಮಾಡಲಾಯಿತು.
ನಾಶ ಮಾಡಿರುವುದರಲ್ಲಿ ಭಾರತೀಯ ಮದ್ಯ, ಬೀಯರ್, ಗೋವಾ ಫೆನ್ನಿ, ಗೋವಾ ಸರಾಯಿ, ಕಳ್ಳಭಟ್ಟಿ ಸರಾಯಿ, ಗೇರು ಹಣ್ಣಿನ ಸರಾಯಿ ಸೇರಿದಂತೆ ಸುಮಾರು ೧೩೬ ಲೀಟರ್ ಅಂದಾಜು ಮೊತ್ತ ರೂ.೪೭,೫೦೦ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಸೂಚನೆಯ ಮೇರೆಗೆ ಕೈಗೊಂಡಿದ್ದು ಅಬಕಾರಿ ಉಪ ಅಧೀಕ್ಷಕ (ಪ್ರಭಾರಿ) ಹೊನ್ನಾವರ ಉಪ ವಿಭಾಗದ ದಾಮೋದರ ನಾಯ್ಕ, ಅಬಕಾರಿ ನಿರೀಕ್ಷಕ(ಪ್ರಭಾರ) ಜಿ.ಎಲ್. ಬೋರಕರ್, ಭಟ್ಕಳ ವಲಯ ಅಬಕಾರಿ ಉಪ ನಿರೀಕ್ಷಕ ರವೀಂದ್ರನಾಥ ಎಸ್., ಸಿಬ್ಬಂದಿಗಳಾದ ಸೈಯದ್ ಹಮೀದ್, ಗಜಾನನ ನಾಯ್ಕ, ಶ್ರೀನಿವಾಸ ಗೌಡ ಮುಂತಾಧವರು ಭಾಗವಹಿಸಿದ್ದರು.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ