May 2, 2024

Bhavana Tv

Its Your Channel

ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡಗಟ್ಟುವಲ್ಲಿ ಆಯಾ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ, ಜಿಲ್ಲೆಯ ಎಲ್ಲ ಗಡಿಗಳನ್ನು ಹೊರ ಜಿಲ್ಲೆಯ ಪ್ರಯಾಣಿಕರಿಗಾಗಿ ಬಂದ್, ಅಗತ್ಯ ಹಾಗೂ ವೈದ್ಯಕೀಯ ತುರ್ತು ಕಾರಣಗಳಿಲ್ಲದೆ ಯಾರನ್ನು ಕೂಡ ಗಡಿಯನ್ನು ಪ್ರವೇಶಿಸಲು ಬಿಡುತ್ತಿಲ್ಲ ಎಂಬ ಮಾಹಿತಿ ಲಭ್ಯ,

ಭಟ್ಕಳ: ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡಗಟ್ಟುವಲ್ಲಿ ಆಯಾ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಂಡಿದ್ದು ಜಿಲ್ಲೆಯ ಎಲ್ಲ ಗಡಿಗಳನ್ನು ಹೊರ ಜಿಲ್ಲೆಯ ಪ್ರಯಾಣಿಕರಿಗಾಗಿ ಬಂದ್ ಮಾಡಿಲಾಗಿದೆ. ಅಗತ್ಯ ಹಾಗೂ ವೈದ್ಯಕೀಯ ತುರ್ತು ಕಾರಣಗಳಿಲ್ಲದೆ ಯಾರನ್ನು ಕೂಡ ಗಡಿಯನ್ನು ಪ್ರವೇಶಿಸಲು ಬಿಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇಂತಹ ಸ್ಥಿತಿಯಲ್ಲಿ ಭಟ್ಕಳದಿಂದ ಉಡುಪಿ ಹಾಗೂ ದ.ಕ ಜಿಲ್ಲೆಗೆ ಪ್ರಯಾಣಿಸುವವರು ಅತ್ಯಂತ ಎಚ್ಚರಿಕೆಯಿಂದ ಮತ್ತು ಅಗತ್ಯ ವೈದ್ಯಕೀಯ ದಾಖಲೆಗಳೊಂದಿಗೆ ಪ್ರಯಾಣಿಸಬೇಕೆಂಬ ಸೂಚನೆಯನ್ನು ಅಧಿಕಾರಿಗಳು ಸಾರ್ವಜನಿಕರಿಗೆ ನೀಡಿದ್ದಾರೆ. ಭಟ್ಕಳದಿಂದ ಮಂಗಳೂರು ಹಾಗೂ ಉಡುಪಿಗೆ ಪ್ರಯಾಣಿಸುವ ವಾಹನಗಳನ್ನು ಶೀರೂರು ಚೆಕ್ ಪೋಸ್ಟ್ ನಲ್ಲಿಯೆ ತಪಾಸಣೆ ಮಾಡಲಾಗುತ್ತಿದ್ದು ಅಗತ್ಯ ದಾಖಲೆಗಳಿದ್ದವರಿಗೆ ಮಾತ್ರ ಒಳಗೆ ಬಿಡಲಾಗುತ್ತಿದೆ. ವೈದ್ಯಕೀಯ ಕಾರಣಕ್ಕಾಗಿ ಕುಂದಾಪುರ, ಉಡುಪಿ ಮತ್ತು ಮಂಗಳೂರು ಆಸ್ಪತ್ರೆಗೆ ತೆರಳುವ ರೋಗಿಗಳು ತಮ್ಮ ಬಳಿ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳುವುದು. ಇದರಿಂದಾಗಿ ಅನಗತ್ಯ ವಿಳಂಬಕ್ಕೆ ಕಾರಣವಾಗಿ ಜೀವಕ್ಕೆ ತುತ್ತೆರಗಲು ಕಾರಣವಾಗಬಹುದು. ಅಗತ್ಯ ಹಾಗೂ ವೈದ್ಯಕೀಯ ತುರ್ತು ಕಾರಣಗಳಿಗಾಗಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಬಾರದು ಎಂಬ ಆದೇಶವನ್ನು ಜಿಲ್ಲಾಡಳಿತ ನೀಡಿದ್ದರೂ ಕೂಡ ಕೆಲವರು ಇದರ ದುರ್ಲಾಭ ಪಡೆದು ಅನ್ಯ ಕಾರಣಕ್ಕೆ ಗಡಿ ಪ್ರವೇಶಿಸುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಲ್ಲರನ್ನೂ ತಪಾಸಣೆ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿಯೆ ಚೆಕ್ ಪೋಷ್ಟ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ವ್ಯಾಪಾರ ಹಾಗೂ ನೌಕರಿಗಾಗಿ ಉಡುಪಿ ಜಿಲ್ಲೆಗೆ ಹೋಗುವವರನ್ನು ಶೀರೂರು ಗಡಿಯಿಂದಲೇ ವಾಪಸ್ ಕಳುಹಿಸಲಾಗುತ್ತಿದೆ.

ಈ ಕಾರಣಕ್ಕಾಗಿ ಭಟ್ಕಳದಿಂದ ತುರ್ತು ವೈದ್ಯಕೀಯ ಕಾರಣಗಳಿಗಾಗಿ ಮಂಗಳೂರು, ಉಡುಪಿಗೆ ಹೋಗುವ ರೋಗಿಗಳು ತೀರ ಅಗತ್ಯವಾಗಿರುವ ಎಲ್ಲ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಎಂಬ ಮನವಿಯನ್ನು ಪೊಲೀಸ ಅಧಿಕಾರಿಗಳು ಮಾಡಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೈಂದೂರು ಪೊಲೀಸ್ ಸರ್ಕಲ್ ಇನ್ಪೆಕ್ಟರ್ ಸುರೇಶ್ ನಾಯಕ್, ಮೆಡಿಕಲ್ ಎಮರ್ಜೆನ್ಸಿಯ ಹೆಸರಲ್ಲಿ ಉಡುಪಿ ಜಿಲ್ಲೆಯ ಗಡಿಗಳನ್ನು ಪ್ರವೇಶಿವು ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರಗಿಸಲಾಗುವುದು ಅಲ್ಲದೆ ವಾಹನಗಳನ್ನು ಮುಟ್ಟುಗೂಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

error: