April 17, 2025

Bhavana Tv

Its Your Channel

ಉತ್ತರಕನ್ನಡದಲ್ಲಿ ಸೋಮವಾರವು ಕೊರೋನಾ ಆಟ ೭೮ ಪ್ರಕರಣ ಧೃಡ: ೪೦ ಜನರು ಡಿಸ್ಚಾರ್ಜ

ಕಾರವಾರ: ಜಿಲ್ಲೆಯಲ್ಲಿ ಕರೋನಾ ಪ್ರಕರಣ ಹೆಚ್ಚುತ್ತಲ್ಲಿದ್ದು ಸೋಮವಾರವು ಕರೋನಾ ಓಟ ಮುಂದುವರೆದಿದೆ. ಹಳಿಯಾಳದಲ್ಲಿ ಪ್ರಕರಣ ಹೆಚ್ಚುತ್ತಲ್ಲಿದ್ದು, ಇಂದು ಕೂಡಾ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತಾಲೂಕವಾರು ವಿವರ ನೋಡುವುದಾದರೆ, ಅಂಕೋಲಾದಲ್ಲಿ ೧೬, ಭಟ್ಕಳದಲ್ಲಿ ೧೩, ಹಳಿಯಾಳದಲ್ಲಿ ೩೯, ಕಾರವಾರದಲ್ಲಿ ೧, ಕುಮಟಾದಲ್ಲಿ ೮, ಮುಂಡಗೋಡದಲ್ಲಿ ೧ ಪ್ರಕರಣಗಳು ದೃಢವಾಗುವ ಮೂಲಕ ೭೮ ಪ್ರಕರಣ ಪತ್ತೆಯಾಗಿದೆ.
ಈವರೆಗೆ ಜಿಲ್ಲೆಯ ೧,೧೬೩ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೪೮೫ ಮಂದಿ ಗುಣಮುಖರಾಗಿಮನೆಗೆ ವಾಪಸ್ಸಾಗಿದ್ದಾರೆ. ೧೦ ಮಂದಿ ಕೊರೋನಾಗೆ ಸಾವನ್ನಪ್ಪಿದ್ದು, ೬೬೮ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಎಂದು ಹೆಲ್ತ ಬುಲೆಟಿನ್ ನಲ್ಲಿ ಧೃಡವಾಗಿದೆ. ಇಂದು ಕೂಡಾ ಆಸ್ಪತ್ರೆಯಿಂದ ೪೦ ಮಂದಿ ಗುಣಮುಖರಾಗಿದ್ದು, ಹೊನ್ನಾವರದಲ್ಲಿ ಓರ್ವ, ಕಾರವಾರದಲ್ಲಿ ಐವರು, ಕುಮಟಾದಲ್ಲಿ ೧೯, ಮುಂಡಗೋಡದಲ್ಲಿ ೧೪, ಶಿರಸಿಯಲ್ಲಿ ಒಬ್ಬರು, ಗುಣಮುಖರಾಗಿ ಮನೆಗೆ ಮರಳಿದ್ದಾರೆ.

error: