
ಹೊನ್ನಾವರ: ದಿನದಿಂದ ದಿನಕ್ಕೆ ಕೊರೋನಾ ಓಟ ಮುಂದುವರೆಯುತ್ತಿದ್ದು ಶನಿವಾರವು ಜಿಲ್ಲೆಯಲ್ಲಿ ೭೫ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗುವ ಸಾಧ್ಯತೆ ದಟ್ಟವಾಗಿದೆ. ಭಟ್ಕಳ ಒಂದೇ ತಾಲೂಕಿನಲ್ಲಿ ೬೦ ಮಂದಿಯಲ್ಲಿ ಸೊಂಕು ಧೃಡ ಎನ್ನುವ ಮಾಹಿತಿ ಲಭ್ಯವಿದ್ದು ತಾಲೂಕಿನ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ತಹಶೀಲ್ದಾರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸೊಂಕು ಕೆಲ ದಿನದ ಹಿಂದೆ ಧೃಡವಾಗಿ ಸೀಲ್ ಡೌನ್ ಬಳಿಕ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇನ್ನೊರ್ವರಲ್ಲಿ ಸೋಂಕು ಪತ್ತೆಯಾಗಿದೆ. ೮ ಜನ ಮುಂಡಳ್ಳಿ ನಿವಾಸಿಗಳಿಗೂ ಒಂದೇ ದಿನ ಸೊಂಕು ಪತ್ತೆಯಾಗಿದ್ದು ಉಳಿದಂತೆ ತಾಲೂಕಿನ ವಿವಿಧ ಭಾಗದವರಿಗೆ ಸೋಂಕು ದೃಡವಾಗಿದೆ
ಹೊನ್ನಾವರ ತಾಲೂಕಿನಲ್ಲಿ ೭ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಪಟ್ಟಣದ ಬಜಾರ ರಸ್ತೆ ಮಾಸ್ತಿಕಟ್ಟೆಯ ೨೬ ವರ್ಷದ ಪುರುಷ, ಮಂಕಿ ದೊಡ್ಡ ಗುಂಡ ಒಂದೇ ಕುಟುಂಬದ ಮೂವರು ಅಂದರೆ ೩೦ ವರ್ಷದ ಮಹಿಳೆ, ೭ ಹಾಗೂ ೫ ವರ್ಷದ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಕೆಳಗಿನ ಪಾಳ್ಯದ ೨೬ ವರ್ಷದ ಮಹಿಳೆ ೪ ವರ್ಷದ ಹೆಣ್ಣು ಮಗುವಿನಲ್ಲಿ ಹಾಗೂ ಕರ್ಕಿಯ ೬ ವರ್ಷದ ಬಾಲಕನಲ್ಲಿಯೂ ಸೋಂಕು ಧೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಜೆ ಪ್ರಕಟವಾಗುವ ಹೆಲ್ತ ಬುಲೆಟಿನನಲ್ಲಿ ಸಂಪೂರ್ಣ ಮಾಹಿತಿ ದಾಖಲಾಗುವ ಸಾಧ್ಯತೆ ಇದೆ.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ