December 22, 2024

Bhavana Tv

Its Your Channel

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಮೂರನೇ ದಿನ

ಯಕ್ಷಗಾನ ಶೈಲಿಯಲ್ಲಿ ಇಡಗುಂಜಿ ಮೇಳದ ಹಿಮ್ಮೇಳದವರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಮೂರನೇ ದಿನದ ಸಭಾಕಾರ್ಯಕ್ರಮ ಶುಭಾರಂಭಗೊAಡಿತು. ಅಂಬಾಚರಣದಾಸ ಡಾ. ಭೀಮೇಶ್ವರ ಜೋಶಿಯವರು ಇತರ ಸಭಾಸದರೊಂದಿಗೆ ಸಭೆಯನ್ನು ಉದ್ಘಾಟಿಸಿದರು.

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಸಮ್ಮಾನವನ್ನು ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ, ರಾಷ್ಟç ಪ್ರಶಸ್ತಿ ಪುರಸ್ಕöÈತ ಮೂಡಲಪಾಯ ಯಕ್ಷಗಾನ ಕಲಾವಿದರಾದ ಎ.ಎಸ್. ನಂಜಪ್ಪ, ಯಕ್ಷಗಾನ ಕಲಾವಿದರಾದ ಎಂ. ಕೆ. ರಮೇಶ ಆಚಾರ್ಯ ಮತ್ತು ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಮೈಸೂರು ಇವರಿಗೆ ನೀಡಿ ಸನ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಕೃಷ್ಣ ಗಾಣಿಗರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಕೆರೆಮನೆ ಮೇಳದೊಂದಿಗೆ ತನ್ನ ಸಂಬAಧವನ್ನು ಸ್ಮರಿಸಿದರು. ಎ.ಎಸ್. ನಂಜಪ್ಪನವರು ಮಾತನಾಡುತ್ತ ಯಕ್ಷಗಾನ ಪ್ರಾಕಾರಗಳಲ್ಲೆ ಒಂದಾದ ಮೂಡಲಪಾಯ ಯಕ್ಷಗಾನವನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಎಂ. ಕೆ. ರಮೇಶ ಆಚಾರ್ಯರವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಯಕ್ಷಗಾನ ಉದ್ಯಮವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕೆರೆಮನೆ ಮಂಡಳಿ ಪಾರಂಪರಿಕತೆಯನ್ನು ಕಳೆದುಕೊಳ್ಳದೇ ಮುಂದುವರಿಯುತ್ತಿರುವುದು ಅನನ್ಯ. ದಿ. ಗಜಾನನ ಹೆಗಡೆಯವರ ಯಕ್ಷಗಾನ ಪ್ರಸಂಗದ ಅಂಬೆಯ ಪಾತ್ರವನ್ನು ಪ್ರಸ್ತುತ ಅಂಬೆಯ ಚಿತ್ರಣದೊಂದಿಗೆ ಹೋಲಿಸಿ ವಿಶ್ಲೇಷಿಸಿದರು.
ಯಕ್ಷಗಾನ ವಿದ್ವಾಂಸರಾದ ಡಾ. ವಸಂತ ಭಾರಧ್ವಾಜ್ ಮಾತನಾಡುತ್ತಾ ಕೆಲವು ಪಾತ್ರಗಳನ್ನು ಮಾಡಿ ಯಕ್ಷಗಾನದ ನಂಟನ್ನು ಆರಂಭಿಸಿದ ನನಗೆ ಆ ಬಂಧದಿAದಲೇ ನನ್ನಿಂದಾದ ಯಕ್ಷಗಾನ ಛಂದಸ್ಸು, ಸಂಶೋಧನೆ ಮತ್ತು ಪ್ರಸಂಗ ಬರೆಯುವಿಕೆ ಆರಂಭವಾಯಿತು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅಂಬಾಚರಣದಾಸ ಡಾ. ಭೀಮೇಶ್ವರ ಜೋಶಿಯವರು ಮಾತನಾಡುತ್ತ ಕಲಾವಿದನಿಗೆ ಇರುವ ಕಲಾರಂಗದ ಪಾವಿತ್ರ÷್ಯತೆಯನ್ನು, ಪಾರಂಪರಿಕತೆಯನ್ನು ಮತ್ತು ಶಾಸ್ತಿçÃಯತೆಯನ್ನು ಉಳಿಸಿ ಬೆಳೆಸಿದ ಮಹಾನ್ ಕಲಾವಿದ ಶಂಭು ಹೆಗಡೆಯವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳವಣಿಗೆಯ ನಿರಂತತೆಯಲ್ಲಿ ಸಂಸ್ಕöÈತಿಗೆ ಅಪಚಾರ ಆಗದಂತೆ ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಾಟ್ಯೋತ್ಸವದ ಈ ಚಿಂತನೆಯನ್ನು ಕೊಂಡಾಡಿದರು. ಭಾರತದ ಭವ್ಯತೆ ಲಲಿತ ಕಲೆಗಳಲ್ಲಿ ಅಡಗಿದೆ. ಈ ಲಲಿತ ಕಲೆಗಳ ಭವ್ಯತೆಯ ಶಕ್ತಿಯೇ ಭಾರತವನ್ನು ಜಗದ್ಗುರು ಸ್ಥಾನಕ್ಕೆ ತಲುಪಿಸಿದೆ. ಭಾವಶುದ್ಧಿಯಿಂದ ಮನಃಶುದ್ಧಿ. ಮನಃಶುದ್ಧಿಯಿಂದ ಜೀವನ ಶುದ್ಧಿ, ಜೀವನಶುದ್ಧಿಯಿಂದ ಭವಿಷ್ಯ ಶುದ್ಧಿ, ಭವಿಷ್ಯ ಶುದ್ಧಿಯಿಂದ ಕಲಾರಂಗದ ಶುದ್ಧಿಗೆ ಕಾರಣವಾಗುವ ಭಾವೈಕ್ಯತೆಯ, ಪಾವಿತ್ರ÷್ಯತೆಯ ಪೂರಕವಾಗಿ ಕಲಾವಿದ ಯಕ್ಷಗಾನ ಪಾತ್ರವನ್ನು ನಿರ್ವಹಿಸಬೇಕೆ ಹೊರತು ವ್ಯವಹಾರಿಕತೆಯನ್ನು ಪಾತ್ರಕ್ಕೆ ಸಮ್ಮಿಲನಗೊಳಿಸಬೇಡಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಂ. ಕೆ. ಭಾಸ್ಕರ ರಾವ್ ರವರು ಮಾತನಾಡಿ ಪ್ರತಿಯೊಂದು ಕಲೆಗೂ ಮಿತಿಯಿದೆ. ಈ ಮಿತಿಯನ್ನು ವೀಕ್ಷಕರ ಅಭಿರುಚಿಗಾಗಿ ಅಥವಾ ಚಪ್ಪಾಳೆ ಗಿಟ್ಟಿಸುವುದಕ್ಕಾಗಿ ಮಿತಿಯನ್ನು ದಾಟಿ ಶಾಸ್ತಿçÃಯತೆಯನ್ನು ಕಳೆದುಕೊಳ್ಳುವ ಕಲಾವಿದನ ಭಾವಸ್ಥಿತಿಯನ್ನು ವಿಶ್ಲೆಷಿಸಿ ಬೇಸರ ವ್ಯಕ್ತಪಡಿಸಿದರು.

ಡಾ. ವಿ. ಜಯರಾಜನ್ ಮಾತನಾಡುತ್ತ ಕೇರಳದ ಭಾಗವಾದ ಜಾನಪದ ಕಲೆಯನ್ನು ಪ್ರದರ್ಶಿಸಲು ಅವಕಾಶಕೊಟ್ಟಿದ್ದಕ್ಕೆ ಧನ್ಯವಾದವನ್ನು ವ್ಯಕ್ತಪಡಿಸಿದರು. ಅಸ್ಸಾಂನಿAದ ಆಗಮಿಸಿದ ಪ್ರಂಜಲ್ ಸೈಕಿಯಾ ಅನಿಸಿಕೆ ವ್ಯಕ್ತಪಡಿಸುತ್ತಾ ಹಸಿರಾದ ಪ್ರಾಕೃತಿಕ ಪರಿಸರದಲ್ಲಿರುವ ಈ ಭವ್ಯ ಬಯಲು ರಂಗಮAದಿರ ಭಾರತದ ಎಲ್ಲಾ ಕಲಾಪ್ರಕಾರಗಳಿಗೆ ಪ್ರೇರಕವಾಗಿದೆ ಎಂದರು. ಊರಿನ ಮುಖಂಡರಾದ ಗಣಪಯ್ಯ ಗೌಡರವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯರಾದ ಯು. ಬಿ. ವೆಂಕಟೇಶ್ ರವರು ಮಾತನಾಡುತ್ತಾ ಕಳೆದ ೮೫ ವರ್ಷಗಳಿಂದ ಶ್ರೀ ಇಡಗುಂಜಿ ಮೇಳವನ್ನು ಕಟ್ಟಿಕೊಂಡು ಸರಸ್ವತಿ ಪೂಜೆಯನ್ನು ಮುಂದವರಿಸುತ್ತಿರುವುದು ಅನನ್ಯ ಎಂದರು. ಡ್ಯಾಡಿ ಮಮ್ಮಿ ಸಂಸ್ಕöÈತಿಯು ವಿಜೃಂಭಿಸುತ್ತಿರುವ ಈ ಸಂಘರ್ಷ ಕಾಲದಲ್ಲಿ ಮಾನವೀಯ ಸಂಸ್ಕöÈತಿಯನ್ನು, ಲಲಿತ ಕಲೆಗಳ ಸಂಸ್ಕöÈತಿಯನ್ನು ಉಳಿಸಿ ಬೆಳೆಸಲು ಪೂರಕವಾಗಿ ನಿಂತಿರುವ ನಾಟ್ಯೋತ್ಸವದ ಸಂಗತಿಗಳನ್ನು ಕೊಂಡಾಡಿದರು. ಇಂತಹ ಮಹೋತ್ತಮ ಸಂಘಟನೆಗೆ ಸಮಾಜ, ಸರ್ಕಾರ ಮತ್ತು ಸಂಘಸAಸ್ಥೆಗಳು ಪ್ರೋತ್ಸಾಹಿಸುವ ಅತ್ಯಗತ್ಯತೆಯನ್ನು ವ್ಯಕ್ತಪಡಿಸಿದರು. ಶಿವಾನಂದ ಹೆಗಡೆಯ್ವರು ಸರ್ವರನ್ನೂ ವಂದಿಸಿ, ಶ್ರೀಧರ ಹೆಗಡೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಪ್ರಾಸ್ತಾವಿಕ ಮಾತಿನೊಂದಿಗೆ ಸಂಘಟನೆಯ ಕಾರ್ಯಧ್ಯಕ್ಷರಾದ ಶ್ರೀ ಲಕ್ಷಿ÷್ಮÃನಾರಾಯಣ ಕಾಶಿಯವರು ಸ್ವಾಗತಿಸಿದರು.
ಶ್ರೀ ಅರುಣ ಹೆಗಡೆ ಮತ್ತು ಶ್ರೀಮತಿ ಕಲ್ಪನಾ ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.

error: