ಹೊನ್ನಾವರ: ಉತ್ಕೃಷ್ಟವಾದ ವನ್ಯಜೀವಿಗಳ ರಕ್ಷಣೆ ಹಾಗೂ ಸಂತತಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ೫ ತಾಲೂಕಿನ ಸುಮಾರು ೫೭ ಗ್ರಾಮಗಳ ೪೪,೩೪೩ ಹೆಕ್ಟೇರ್ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿದ್ದಲ್ಲಿ ಸದ್ರಿ ಪ್ರದೇಶದಲ್ಲಿ ಹೆಚ್ಚಿಗೆ ವನ್ಯಜೀವಿ ಪಾಲನೆ ಮಾಡುವ ಉದ್ದೇಶದಿಂದ ಅಭಯಾರಣ್ಯ ಪ್ರದೇಶ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ತಾಲೂಕಿನ ಮಾಗೋಡ ಗ್ರಾಮದಲ್ಲಿ ಅಭಯಾರಣ್ಯದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯವಾಸಿಗಳೊಂದಿಗೆ ಮಾತನಾಡುತ್ತಿದ್ದರು.
ಅಭಯಾರಣ್ಯ ಪ್ರದೇಶದಲ್ಲಿ ಸಿಂಹ, ಹುಲಿ, ಆನೆ, ಚಿರತೆ, ಕಾಡುಕೋಣ, ಕರಡಿ, ನರಿ ಮುಂತಾದ ವನ್ಯಜೀವಿ ರಕ್ಷಣಾ ಕಾಯಿದೆಯಲ್ಲಿ ಉಲ್ಲೇಖಿಸಿದ ಪರಿಶಿಷ್ಟ ಭಾಗ ೧ ರಲ್ಲಿ ಉಲ್ಲೇಖಿಸಿದ ಉತ್ಕೃಷ್ಟವಾದ ವನ್ಯಜೀವಿಗಳ ಅಭಿವೃದ್ಧಿ ಮಾಡುವ ಅವಶ್ಯಕತೆ ಇರುವ ಉದ್ದೇಶದಿಂದಲೇ ಸರಕಾರ ಕಳೆದ ವರ್ಷ ಜೂನ್ ೬ ರಂದು ಹೊರಡಿಸಿದ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ನೈಸರ್ಗಿಕ ಅಸಮತೋಲನದಿಂದ ಇತ್ತೀಚಿನ ದಿನಗಳಲ್ಲಿ ಉತ್ಕೃಷ್ಟ ವನ್ಯಜೀವಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ವನ್ಯಜೀವಿಗಳ ಪಾಲನೆ,ಪೋಷಣೆ, ಹಾಗೂ ಹೆಚ್ಚಿನ ಅಭಿವೃದ್ಧಿಗೆ ಸಾಧ್ಯವಾಗುವುದರಿಂದ ಪರಿಸರ ಸೂಕ್ಷö್ಮ ಪ್ರದೇಶವೆಂದು ಅಭಯಾರಣ್ಯ ಘೋಷಿತ ಪ್ರದೇಶವನ್ನು ಪೋಷಿಸುವ ಉದ್ದೇಶವನ್ನು ಹೊಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದು ಗಮನಾರ್ಹವೆಂದು ಹೇಳಿದರು. ಘೋಷಿತ ಅಭಯಾರಣ್ಯ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಮಾನವ ಜೀವನಕ್ಕೆ ಕಾನೂನಾತ್ಮಕವಾಗಿ ನಿಯಂತ್ರಿಸುವ ಮಾನದಂಡಗಳು ವಿಧಿಸುವುದರಿಂದ ಜನ ಜೀವನಕ್ಕೆ ಸ್ವತಂತ್ರತೆ ಸಿಗಲಾರದು ಎಂದು ರವೀಂದ್ರ ನಾಯ್ಕ ಹೇಳಿದರು.
ಭೌಗೋಳಿಕವಾಗಿ ಉತ್ಕೃಷ್ಟ ನೈಸರ್ಗಿಕ ಅರಣ್ಯ ಮತ್ತು ಜಾಗತಿಕ ಜೀವ ವೈವಿಧ್ಯ ಕೇಂದ್ರ ಸ್ಥಾನವಾಗಿರುವ ಘೋಷಿತ ಅಭಯಾರಣ್ಯ ಸೂಕ್ಷö್ಮ ಪ್ರದೇಶವೂ ಆಗಿರುವುದರಿಂದ ಈ್ರ ಪ್ರದೇಶವು ಮಾನವ ಜೀವನಕ್ಕೆ ಸಾಧ್ಯವಾಗದೇ ಮುಂದೊAದು ದಿನ ಈ ಪ್ರದೇಶವು ಪೂರ್ಣ ಪ್ರಮಾಣದ ವನ್ಯ ಜೀವಿಗಳ ತಾಣ ಆಗುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ವಿನೋದಾ ಸುರೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದು ಪ್ರಮುಖರಾದ ಆರ್.ಹೆಚ್ ನಾಯ್ಕ ಜನಗಡಕಲ್, ಶೇಷಗಿರಿ ನಾಯ್ಕ, ಥಾಮಸ್, ಬುಡನ ಸಾಬ, ಮಾದೇವ ನಾಯ್ಕ, ಚಂದ್ರಶೇಖರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಹನುಮಂತ ನಾಯ್ಕ ಸ್ವಾಗತಿಸಿ ವಂದಿಸಿದರು, ಕೇಶವ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ