December 19, 2024

Bhavana Tv

Its Your Channel

ಭಟ್ಕಳ ತಾಲೂಕ ಶಿರಾಲಿ ಮಿನೂ ಮಾರುಕಟ್ಟೆಯ ಮಹಿಳಾ ಮೀನು ಮಾರಾಟಗಾರರಿಂದ ಅನಿರ್ದಿಷ್ಟಾವದಿ ಹೋರಾಟ

ಭಟ್ಕಳ ತಾಲೂಕ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನು ಮಾರುಕಟ್ಟೆಯಲ್ಲಿ ಹಲವಾರು ತಿಂಗಳಿAದ ತಲೆ ಎತ್ತಿರುವ ಸಮಸ್ಯೆಯನ್ನು ಸ್ಥಳಿಯ ಗ್ರಾಮ ಪಂಚಾಯತ್ ಬಗೆಹರಿಸದ ಕಾರಣ ಸ್ಥಳಿಯ ಮಹಿಳಾ ಮೀನು ಮಾರಾಟಗಾರರು ಅನಿರ್ದಿಷ್ಟಾವದಿಯವರೆಗೆ ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಯನ್ನು ಪ್ರಾರಂಬಿಸಿದ್ದಾರೆ.

ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀನು ಮಾರಟ ಕೆಂದ್ರ ಮುಂಬಾಗದಲ್ಲಿ ಖಾಸಗಿ ವ್ಯಕ್ತಿ ಮೀನು ಮೀನು ಮಾರಾಟ ಮಾಡುತ್ತಿರುವುದನ್ನು ವಿರೊದಿಸಿ ಬುದವಾರ ಮಹಿಳಾ ಮೀನು ಮಾರಾಟಗಾರ ಮಹಿಳೆಯರು ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು ಆದರೆ ಗ್ರಾಮ ಪಂಚಾಯತ್‌ಅಧ್ಯಕ್ಷರಾಗಲಿ , ಪಿ ಡಿ ಓ ಆಗಲಿ ಇವರ ಈ ಪ್ರತಿಭಟನೆಗೆಕ್ಯಾರೆ ಎನ್ನದೆ ಉರಿಯುವಗಾಯಕ್ಕೆ ಉಪ್ಪು ತುಂಬುವ ಕೆಲಸಕ್ಕೆ ಕೈ ಹಾಕಿದ್ದರು ಒಂದು ಕಡೆ ಗ್ರಾಮ ಪ ಂಚಾಯತ್ ಬಿದಿಗಳಲ್ಲಿ ಮೀನು ಮಾರಾಟ ಮಾಡಬೇಡಿ ಮೀನು ಮಾರುಕಟ್ಟೆಯಲ್ಲೆ ಮೀನು ಮಾರಾಟ ಮಾಡಿ ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನಿನ ಮಾತನಾಡಿ ಈಗ ಖಾಸಗಿ ವ್ಯಕ್ತಿಯೊಬ್ಬರಿಗೆ ಮಿನು ಮಾರುಕಟ್ಟೆಯ ಮುಂಬಾಗದಲ್ಲಿ ಮೀನು ಮಾರಾಟ ಮಾಡಲು ಅನುಮತಿ ಪತ್ರವನ್ನು ನೀಡಿ ನಂತರರದ್ದು ಪಡಿಸಿದೆ ಆದರೆ ಖಾಸಗಿ ವ್ಯಕ್ತಿಯನ್ನು ಮೀನು ಮಾರಾಟ ಮಾಡುವುದನ್ನು ತಡೆಯು ಪ್ರಯತ್ನವನ್ನು ಮಾಡುತ್ತಿಲ್ಲಾ ಇದು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಊಹಾಪೋಹವನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ ಮೀನು ಮಾರುಕಟ್ಟೆಯ ವಿಷಯದಲ್ಲಿ ಗ್ರಾಮ ಪಂಚಾಯತ್ ತೋರಿಸುತ್ತಿರುವ ಇಬ್ಬಗೆಯ ನೀತಿಯ ಹಿನ್ನೆಲೆಯಲ್ಲಿ ಸೋಮವಾgದಿಂದ ಸ್ಥಳಿಯ ಮೀನು ಮಾರುಕಟ್ಟೆಯ ಮಹಿಳಾ ಮೀನು ಮಾರಾಟಗಾರರದೀ ಸಮಸ್ಯೆ ಗ್ರಾಮ ಪಂಚಾಯತ್ ಎಲ್ಲಿಯವರೆಗೆ ಬಗೆ ಹರಿಸುವುದಿಲ್ಲವೊ ಅಲ್ಲಿಯವರೆಗೆ ಗ್ರಾಮ ಪಂಚಾಯತ್ ವರಾಂಟದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದಾರೆ
ಈ ಬಗ್ಗೆ ಸ್ದಳಿಯ ಮಹಿಳಾ ಮೀನು ಮಾರಾಟಗಾರರಾದ ಗೀತಾ ಗಣಪತಿ ಮೊಗೇರ್ ಮಾತನಾಡಿ ನಾವು ಈ ಮೀನು ಮಾರಾಟ ಮಾಡುವುದರ ಮೂಲಕ ಜೀವನ ಸಾಗಿಸುತ್ತಿದ್ದೆವೆ ಆದರೆ ಈಗ ಗ್ರಾಮ ಪಂಚಾಯತ್ ಖಾಸಗಿ ವ್ಯಕ್ತಿಯೊಬ್ಬನು ನಮ್ಮ ಮೀನು ಮಾರಾಟ ಕೆಂದ್ರ ಮುಂಬಾಗದಲ್ಲಿ ಅನದಿಕ್ರತವಾಗಿ ಮೀನು ಮಾರಾಟ ಮಾಡುತ್ತಿದ್ದರು ಯಾವುದೆ ಕ್ರಮವನ್ನು ಕೈಗೊಳ್ಳದೆ ಬೆಜವಬ್ದಾರಿತನವನ್ನು ತೋರಿಸುತ್ತಿದೆ ಇದರಿಂದ ನಾವು ಅನಿರ್ದಿಷ್ಟಾವದಿಯವರೆಗೆ ಪ್ರತಿಭಟನೆಯನ್ನು ನಡೆಸುತ್ತಿದ್ದೆವೆ ಎಂದು ಹೇಳಿದರು

error: