September 14, 2024

Bhavana Tv

Its Your Channel

ವಿವಿಧ ಕಾಮಗಾರಿಗಳಿಗೆ ಶಾಸಕ ಸುನೀಲ ನಾಯ್ಕ ಸೋಮವಾರ ಗುದ್ದಲಿಪೂಜೆ

ಹೊನ್ನಾವರ ತಾಲೂಕಿನ ಕೇಳಗಿನ ಇಡಗುಂಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಳಕೋಡ ಕ್ಷೇತ್ರಪಾಲ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ೨೫ ಲಕ್ಷದ ಯಾತ್ರ ನಿವಾಸ ನಿರ್ಮಾಣಕ್ಕೆ ಶಿಲಾನ್ಯಾಸ ಭೂಮಿ ಪೂಜೆ ನೇರವೇರಿಸಿದರು. ನಂತರ ಅಧೇ ಗ್ರಾಮದ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು ಬಳಿಕ ಕುದ್ರಗಿ ಗ್ರಾಮ ಪಂಚಾಯತ ವ್ಯಾಪತಿಯ ಜಂತಲಕೇರಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೫೦ ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿ ಮಾಳಕೋಡ ಗ್ರಾಮದ ಹಲವಾರು ಬೇಡಿಕೆಯನ್ನು ಈಡೇರಿಸಿದ್ದು ಇದೀಗ ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಇಲ್ಲಿನ ಬಹು ವರ್ಷದ ಬೇಡಿಕೆಯಾದ ರಸ್ತೆ ಕಾಮಗಾರಿ ೨ ಕೋಟಿ ವೇಚ್ಚದಲ್ಲಿ ನಡೆಯುತ್ತಿದೆ. ಕ್ಷೇತ್ರಪಾಲ ದೇವಸ್ಥಾನದ ಯಾತ್ರಿ ನಿವಾಸಕ್ಕೆ ಗುದ್ದಲಿ ಪೂಜೆ ನೇರವೇರಿಸಲಾಗಿದೆ.ೆ ಕುದ್ರಗಿ ಗ್ರಾಮದಲ್ಲಿ ೫೦ ಲಕ್ಷದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದೆನೆ. ಮುಂದಿನ ದಿನದಲ್ಲಿ ಹಂತ ಹಂತವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶಂಭು ಗೌಡ, ಗಣಪತಿ ನಾಯ್ಕ ಬಿಟಿ, ಶಂಭು ಬೈಲಾರ, ಇಡಗುಂಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮನಾ ಭಟ್ಟ, ಸದಸ್ಯರಾದ ಕಮಲಾಕರ ನಾಯ್ಕ, ರಾಮಾ ಗೌಡ, ಗ್ರಾಮಸ್ಥರಾದ ಅಮಕೂಸ ಗೌಡ, ಜಗದೀಶ ನಾಯ್ಕ, ವಿವಿದ ಇಲಾಖೆಯ ಅಧಿಕಾರಿಗಳು ಕಾರ್ಯಕರ್ತzರು ಮುಖಂಡರು ಉಪಸ್ಥಿತರಿದ್ದರು.

error: