March 21, 2023

Bhavana Tv

Its Your Channel

ಪ್ರಥಮ ವರ್ಷದ ತಾಲೂಕಾ ಮಟ್ಟದ ಕಬ್ಬಡಿ ಪಂದ್ಯಾವಳಿ ಹೊನ್ನಾವರ ತಾಲೂಕಿನ ಚಿತ್ತಾರ ಗ್ರಾಮ

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೆರ ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಸನ್ಮಾನ ಮಾಡುತಿರುವುದು ಇದೋಂದು ಒಳ್ಳೆಯ ಕಾರ್ಯಕ್ರಮ ಅವರು ಶಾಸಕರಾಗಿದ್ದಾಗ ಒಂದು ಗ್ರಾಮಕ್ಕೆ ಸಿಮಿತವಾಗಿರದೆ ಇಡಿ ವಿದಾನ ಸಬಾ ಕ್ಷೇತ್ರಕ್ಕೆ ರಾತ್ರಿ ಹಗಲಿರುಳು ತನ್ನ ಕ್ಷೇತ್ರದ ಜನತೆ ನಾನು ಎನು ಮಾಡಬಲ್ಲೆ ಎನ್ನುವ ಉದ್ದೇಶವನ್ನಿಟ್ಟು ಕೋಂಡು ಅವರು ಕೇಲಸ ಮಾಡಿದ್ದಾರೆ ಎಂದರು,

ಗ್ರಾಮದಲ್ಲಿ ಚಕ್ ಡ್ಯಾಮ ಮುಂಜುರಿ ಮಾಡಿಸಿಕೋಟ್ಟು ಜನರ ಬೇಡಿಕೆಗೆ ಸ್ಪಂದಿಸಿದ ಮಾಜಿ ಶಾಸಕ ಮಂಕಾಳ ವೈದ್ಯ. ನೀಲಗೋಡು ಕ್ಷೇತ್ರದ ಪ್ರಧಾನ ಅರ್ಚಕ ಮಾದೇವ ಸ್ವಾಮಿ, ಜಿನ್ನೋಡ ಕ್ಷೇತ್ರದ ದರ್ಮ ದರ್ಶಿಗಳಾದ ಶ್ರೀನಾಥ ಪುಜಾರಿ, ಸೈನಿಕ ವೃತಿಯಲ್ಲಿರುವ ಮಂಜುನಾಥ ಗೌಡ ಕುಟುಂಬಸ್ಥರನ್ನು, ಚಿತ್ತಾರ ಪ್ರೌಡ ಶಾಲೆಯ ಶಿಕ್ಷಕ ಪ್ರಕಾಶ ನಾಯ್ಕ, ಲೈನ್‌ಮ್ಯಾನ್ ಗಂಗಾಧರ, ವಿದ್ಯಾರ್ಥಿ ನಾಗರಾಜ ವೈದ್ಯ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು,

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ನನಗೆ ನೀವು ಹಿಂದೆ ಅಧಿಕಾರವನ್ನು ಕೋಟ್ಟಿದರಿ ಐದು ವರ್ಷ ನನ್ನ ಹತ್ತಿರ ಎನು ಸಾದ್ಯವಾಗುತ್ತದೆ ಅದನ್ನು ಮಾಡಿದ್ದೇನೆ. ಮತ್ತೆ ಮಾಡುವುದು ಬಾಕಿ ಇದೆ ಕ್ಷೇತ್ರದ ಸಮಸ್ಯೆ ಪರಿಹಾರ ಮಾಡಲು ಸಾದ್ಯವಾಗುವುದು ಶಾಸಕರಿಂದ ಮಾತ್ರ ಸಾದ್ಯ. ನನ್ನ ಗೆಲುವಿನಲ್ಲಿ ಎಷ್ಟು ಕುಷಿ ಕೋಟ್ಟಿತ್ತು ಅಷ್ಟೆ ಕುಷಿ ಇ ಕಾರ್ಯಕ್ರಮ ನೋಡಿದ್ದಾಗ ಅಷ್ಟೇ ಕುಷಿ ಕೋಟ್ಟಿದೆ ಎಂದರು. ಬ್ರೀಟಿಸರು ಬಿಟ್ಟುಹೋದ ಒಡೆದು ಆಳುವ ನೀತಿಯನ್ನು ರಾಜ ಕಾರಣಿಗಳು ಸುರು ಮಾಡಿಕೋಂಡಿದ್ದಾರೆ ಅದಕ್ಕೆ ನೀವು ಅವಕಾಶ ಮಾಡಿಕೋಡಬಾರದು ಒಗ್ಗಟ್ಟಾಗಿರಬೇಕು. ರಾಜಕಾರಣಿಗಳು ಅವರವರ ಕರ್ತವ್ಯ ಮಾಡಿದರೆ ಸಾಕು ಅಭಿವೃದ್ದಿಯ್ಯಾಗುತ್ತದೆ ಎಂದರು,

ನಂತರ ದಿವ್ಯ ಉಪಸ್ಥಿತಿ ವಹಿಸಿದ ನೀಲಗೋಡು ಕ್ಷೇತ್ರದ ಪ್ರಧಾನ ಅರ್ಚಕ ಮಾದೇವ ಸ್ವಾಮಿ, ಮಾತನಾಡಿ ಒಳ್ಳೆ ಕೇಲಸವನ್ನು ಮಾಡಿದ್ದಾಗ ಬಗವಂತ ನಮ್ಮ ಅರಿಸಿಕೋಂಡು ಬರುತ್ತಾನೆ. ಈ ಯುವಕ ಸಂಘ ಬಹಳ ಒಳ್ಳೆ ಕೆಲಸ ಮಾಡಿದೆ. ದರ್ಮದ ಕಾರ್ಯವನ್ನು ಎಲ್ಲಿ ಮಾಡುತ್ತಾರೆ ಅಲ್ಲಿ ಭಗವಂತನಿರುತ್ತಾನೆ ಇಂತಹ ಕಾರ್ಯ ಒಂದು ದಿನಕ್ಕೆ ಸಿಮಿತವಾಗದೆ ಮುಂದಿನ ದಿನಗಳಲ್ಲಿ ಹಿಗೆಯೆ ಮುಂದುವರಿಯಲಿ ಎಂದರು,

ಅಧ್ಯಕ್ಷತೆವಹಿಸಿದ ಜಿನ್ನೋಡ ಕ್ಷೇತ್ರದ ದರ್ಮ ದರ್ಶಿಗಳಾದ ಶ್ರೀನಾಥ ಪುಜಾರಿ, ಮಾತನಾಡಿ ಇಂತಹ ಕಾರ್ಯಕ್ರಮದಲ್ಲಿ ನೀವೇಲ್ಲರು ಆಗಮಿಸಿ ಕಾರ್ಯಕ್ರಮದ ಯಶಸಿಗೆ ಕಾರಣಿಬೂತರಾಗಿದ್ದಿರಿ ಎಂದರು,

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪಾ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ ಮಾವಿನ ಕುರ್ವಾ, ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ತಾಲೂಕಾ ಪಂಚಾಯತ ಸದಸ್ಯ ಗಣಪಯ್ಯ ಗೌಡ, ಅಣ್ಣಯ್ಯ ನಾಯ್ಕ, ಮಾಜಿ ತಾಲೂಕಾ ಪಂಚಾಯತ ಸದಸ್ಯ ರಾಜು ನಾಯ್ಕ, ತಾಲೂಕಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಾಲಚಂದ್ರ ಗೌಡ, ಚಿತ್ತಾರ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮಾಲ ಗೌಡ, ಮುಂತಾದವರು ಇದ್ದರು.

About Post Author

error: