December 21, 2024

Bhavana Tv

Its Your Channel

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಐದನೇ ದಿನ

????????????????????????????????????

ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ಕೊನೆಯ ದಿನದ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ವೆಶ್ವರ ಹೆಗಡೆ ಕಾಗೇರಿಯವರು ಉದ್ಘಾಟಿಸಿದರು.

????????????????????????????????????

ಕೆರೆಮನೆ ಶಿವರಾಮ ಹೆಗಡೆ ರಾಷ್ಟಿçÃಯ ಪುರಸ್ಕಾರ-೨೦೧೯ ನ್ನು ಚೆನ್ನೆöÊನ ಖ್ಯಾತ ಭರತನಾಟ್ಯ ಕಲಾವಿದರಾದ ಪದ್ಮಭೂಷಣ ಡಾ. ಪದ್ಮಸುಬ್ರಹ್ಮಣ್ಯಂ ಅವರಿಗೆ ಸರ್ವರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕöÈತರ ಪರವಾಗಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ಅಭಿನಂದಿಸುತ್ತಾ ಸೂರ್ಯನು ಉದಯಿಸುವಾಗ ಪದ್ಮ ಅರಳುತ್ತದೆ. ಆದರೆ ಪ್ರಸ್ತುತ ಕಲಾರಂಗದಲ್ಲಿ ಪದ್ಮ ಅರಳುವಾಗ ನಾಟ್ಯರಂಗ ಅರಳುತ್ತದೆ. ಅದಕ್ಕೆ ಪೂರಕವಾಗಿ ಪದ್ಮ ಸುಬ್ರಹ್ಮಣ್ಯಂ ಅವರಿಗೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಯತಾರ್ಥವಾಗಿದೆ ಎಂದು ಅಭಿನಂದಿಸಿದರು.

ಪ್ರಶಸ್ತಿ ಸ್ವೀಕರಿಸಿದ ಡಾ. ಪದ್ಮಸುಬ್ರಹ್ಮಣ್ಯಂ ನಾಟ್ಯಾಂಗಣದ ಬಗ್ಗೆ ಭಾವನೆ ವ್ಯಕ್ತಪಡಿಸುತ್ತಾ ಶ್ರೀ ಶಂಭು ಹೆಗಡೆಯವರ ಹೆಸರಿನಲ್ಲಿ ನಿರ್ಮಿಸಿದ ಈ ಬಯಲು ರಂಗಮAದಿರ ದೈವಿಕ ಶಕ್ತಿಯನ್ನು ಹೊಂದಿದ್ದು ಮುಂದೊAದು ದಿನ ಈ ದೈವಿಕ ವೇದಿಕೆಯಲ್ಲಿ ನೃತ್ಯ ಮಾಡುವುದಾಗಿ ಅಪ್ಯಾಯಮಾನವಾದ ಭಾವನೆ ವ್ಯಕ್ತಪಡಿಸಿದರು. ನಾನು ಪ್ರಕೃತಿಯ ಎಲ್ಲಾ ಚರಾಚರಗಳಲ್ಲಿ ನೃತ್ಯದ ಭಾವವನ್ನು ಸೂಕ್ಷ÷್ಮವಾಗಿ ಅವಲೋಕಿಸುತ್ತಾ, ನನ್ನ ನೃತ್ಯಕ್ಕೆ ಪೂರಕವಾಗಿಸುತ್ತೇನೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭರತಮುನಿಯ ನಾಟ್ಯಶಾಸ್ತç ಜಂಬೂದ್ವೀಪದವರೆಗೆ ವಿಸ್ತರಿಸಿದೆ ಎಂದರು. ಸ್ವಾಮಿ ವಿದ್ಯಾರಣ್ಯರು ಸಾಂಸ್ಕöÈತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಭಾರತೀಯತೆಯೊಂದಿಗೆ ಏಕತೆಯನ್ನು ಈ ಸಾಂಸ್ಕöÈತಿಕ ಲೋಕ ನಿರ್ಮಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀಮಯ ಕಲಾಪೋಷಕ ಪ್ರಶಸ್ತಿಯನ್ನು ಗೀತಾ ಎಚ್. ಎಸ್.ಎನ್.ಫೌಂಡೇಶನ್, ಕುಂದಾಪುರ ಇದರ ಶ್ರೀ ಎ. ಶಂಕರ ಐತಾಳ ಅವರಿಗೆ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾತ್ವಿಕ ಸಮಾಜ ಪಥದ ದಿಗ್ದರ್ಶನದ ನಿರೀಕ್ಷೆಯಲ್ಲಿ ಸಮಾಜ ಸೇವೆಯಲ್ಲಿರುವ ನನಗೆ ಈ ಪ್ರಶಸ್ತಿ ಸಂಭ್ರಮ ತಂದಿದೆ ಎಂದರು.

ಅದಮ್ಯಚೇತನ ಫೌಂಡೇಶನ್, ಬೆಂಗಳೂರು ಇದರ ಮ್ಯಾನೆಜಿಂಗ್ ಟ್ರಸ್ಟಿಯಾದ ಡಾ. ತೇಜಸ್ವಿನಿ ಅನಂತಕುಮಾರ್ ಇವರು ಅಭಿಮಾನದ ನುಡಿಗಳನ್ನು ವ್ಯಕ್ತಪಡಿಸುತ್ತಾ ಅಂತರಾಷ್ಟಿçÃಯದAತಹ ಇಂತಹ ರಾಷ್ಟಿçÃಯ ಕಾರ್ಯಕ್ರಮ ಈ ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಆಯೋಜಿಸುತ್ತಿರುವುದರ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು.

ಪ.ರಾ.ಕೃಷ್ಣಮೂರ್ತಿಯವರು ಮಾತನಾಡುತ್ತಾ ಸಮಾಜ ಸುಧಾರಣೆಗೆ ಕಲೆಯ ಅಭ್ಯುದಯವೇ ನೈಜ ಮಾರ್ಗ ಎಂದರು. ಹೊಸದಿಗಂತದ ಸಂಪಾದಕರಾದ ಶ್ರೀ ವಿನಾಯಕ ಭಟ್ ಮೂರೂರುರವರು ಮಾತನಾಡುತ್ತಾ ಯಕ್ಷಗಾನದಿಂದ ಪೌರಾಣಿಕ ಕಥನ ರಾಮಾಯಣ, ಮಹಾಭಾರತದ ಕಲ್ಪನೆ ಜೀವನ ಆಧಾರವಾಗಿ ಮೈಗೂಡಿ ಸಂಸ್ಕಾರ ಸೌಭಾಗ್ಯ ಮೇಳೈಸುತ್ತದೆ ಎಂದರು. ಚಲನಚಿತ್ರ ನಟರಾದ ಶ್ರೀ ನೀರ್ನಳ್ಳಿ ರಾಮಕೃಷ್ಣರವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ನಾಟ್ಯೋತ್ಸವ ನಿತ್ಯೋತ್ಸವವಾಗಿದೆ ಎಂದರು.
ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧ್ಯಕ್ಷೀಯ ನುಡಿ ತಿಳಿಸುತ್ತಾ ಯಕ್ಷಗಾನ ಸಮೃಧ್ಧವಾಗಿ ಬೆಳೆದರೆ ಸಮಾಜದ ಸಂಸ್ಕಾರ ಹೆಚ್ಚುತ್ತದೆ. ಈ ಅತ್ಯುತ್ತಮ ಸಂಸ್ಕಾರ ವರ್ಧಿಸುವ ಕಾರ್ಯಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಹಕಾರ ನೀಡುವುದಾಗಿ ವ್ಯಕ್ತಪಡಿಸಿದರು. ಬೌದ್ಧಿಕವಾಗಿ ಸಮಾಜ ಉನ್ನತೀಕರಿಸುವ ಜವಾಬ್ದಾರಿಯ ಭಾಗವಾಗಿ ಯಕ್ಷಗಾನವನ್ನು ಸಮೃದ್ಧಿಗೊಳಿಸುವ ಅನಿವಾರ್ಯತೆ ಇದೆ ಎಂದರು. ಶ್ರೀ ಶಿವಾನಂದ ಹೆಗಡೆಯವರು ಸರ್ವರನ್ನೂ ವಂದಿಸಿದರು.

ಶ್ರೀ ಲಕ್ಷಿ÷್ಮÃಕಾಂತ ಗೌಡ ಮತ್ತು ಶ್ರೀ ಬಿ.ಎಂ. ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು.

error: