March 29, 2024

Bhavana Tv

Its Your Channel

ತಾಲೂಕಿನ ಗೋಕರ್ಣ ಮೂಲದ ಶಾರದಾ ಗೌಡ ಎಂಬ ಮಹಿಳೆ ತಹಸೀಲ್ದಾರ್ ಕಚೇರಿ ಬಾಗಿಲಲ್ಲಿ ಸೋಮವಾರ ಧರಣಿ ಕುಳಿತು ಪ್ರತಿಭಟಿಸಿದ

ಈ ಕುರಿತು ಮಾದ್ಯಮದವರೊಂದಿಗೆ ತಮ್ಮ ಅಳಲು ತೋಡಿಕೊಂಡ ಶಾರದಾ ಗೌಡ,” ಗೋಕರ್ಣದ ಸರ್ವೆ ನಂ. ೩೪೦ ರ ಹಿಸ್ಸಾ ೬ಬ ಕ್ಷೇತ್ರ ಒಂದು ಎಕರೆ ೧೧ ಗುಂಟೆ ಜಾಗಕ್ಕೆ ಸಂಬAಧಪಟ್ಟು ನಮ್ಮ ತಾಯಿ ಜಾನಕಿಬಾಯಿ ಅವರ ವಿಲ್ ನಾಮೆ ಮಾಡಿ ಸಂಪೂರ್ಣ ಜಾಗದ ಹಕ್ಕು ಸ್ವಾಮ್ಯವನ್ನು ನನ್ನ ಹೆಸರಿಗೆ ಬರೆದಿದ್ದರು. ವಿಲ್‌ನ ಬಗ್ಗೆ ಒಂದು ವರ್ಷದ ಹಿಂದೆಯೇ ನ್ಯಾಯಾಲಯದ ಆದೇಶವೂ ಆಗಿದ್ದು ನನ್ನ ಹೆಸರಿಗೆ ಖಾತೆ ವರ್ಗಾವಣೆಗೆ ಆದೇಶವಾಗಿದೆ. ಆದರೆ ಕುಮಟಾ ತಹಸೀಲ್ದಾರ್ ಕಾರ್ಯಾಲಯದಲ್ಲಿ ವಿನಾಕಾರಣ ನನ್ನನ್ನು ಸತಾಯಿಸುತ್ತಿದ್ದಾರೆ. ನನ್ನ ಆರೋಗ್ಯವೂ ಸರಿಯಿಲ್ಲ. ಪದೇಪದೇ ಓಡಾಡುವುದು ಸಾಧ್ಯವಾಗುವುದಿಲ್ಲ. ತಹಸೀಲ್ದಾರ್ ಅವರು ಫೆ.೧೭ ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ ಮತ್ತೆ ದಿನಾಂಕವನ್ನು ಬದಲಾಯಿಸಿ ಮುಂದೆ ಹಾಕಿ ಫೆ. ೨೪ ಕ್ಕೆ ನನ್ನನ್ನು ಬರುವಂತೆ ತಿಳಿಸಿದ್ದರು. ಸೋಮವಾರ ಗೋಕರ್ಣದ ಮಹಾರಥೋತ್ಸವ ಇರುವದರಿಂದ ದಿನಾಂಕ ಬದಲಾಯಿಸಿ ಎಂದು ವಿನಂತಿಸಿದರೂ ಒಪ್ಪದೇ ಬರಲೇಬೇಕೆಂದು ಹೇಳಿದ್ದರು. ಆದರೆ ಇಂದು ಇಲ್ಲಿಗೆ ಬಂದರೆ ತಹಸೀಲ್ದಾರ್ ಅವರೇ ಇಲ್ಲ. ಅಲ್ಲದೇ ಇಲ್ಲದಿರುವ ಕುರಿತು ಮುಂಚಿತವಾಗಿ ತಿಳಿಸಿಯೂ ಇಲ್ಲ. ಹೀಗಾಗಿ ತಹಸೀಲ್ದಾರ್ ನನಗೆ ಕೆಲಸ ಮಾಡಿಕೊಡಬೇಕು ಅಥವಾ ಆಗುವುದಿಲ್ಲವೆಂದು ಬರೆದುಕೊಡಬೇಕು. ಅಲ್ಲಿಯವರೆಗೂ ಇಲ್ಲಿಂದ ಕದಲುವುದಿಲ್ಲ “ಎಂದು ಅವರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಮೇಘರಾಜ ನಾಯ್ಕ,” ಅಂಕೋಲಾದ ಜವಾಬ್ದಾರಿಯೂ ನನಗೆ ಇರುವುದರಿಂದಾಗಿ, ತುರ್ತುಕಾರ್ಯ ನಿಮಿತ್ತ ಅಂಕೋಲಾಕ್ಕೆ ಬಂದಿದ್ದೆ. ಇನ್ನು ಧರಣಿ ನಡೆಸಿದ ಮಹಿಳೆಯ ವಿಷಯದಲ್ಲಿ ನಾನು ಯಾವುದೇ ಹೇಳಿಕೆ ನೀಡಲಾರೆ. ಅದು ಕೋರ್ಟಿನ ವಿಚಾರ “ಎಂದಿದ್ದಾರೆ.

error: