April 11, 2024

Bhavana Tv

Its Your Channel

ಕುಮಟಾ ನೆಲ್ಲಿಕೇರಿ ಬಸ್ ನಿಲ್ದಾಣದಿಂದ ಹೊಲನಗದ್ದೆ ಗ್ರಾ.ಪ ವ್ಯಾಪ್ತಿಯ ಕಡ್ಲೆಯ ಗಾಂಧಿವನದವರೆಗೆ ಸ್ಲೋ ಸೈಕಲ್ ರ‍್ಯಾಲಿ

ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಸೈಕಲ್ ತುಳಿಯುವ ಮೂಲಕ ಉದ್ಘಾಟಿಸಿದರು.
ಕಳೆದ ೪೦ ವರ್ಷಗಳ ಹಿಂದೆ ಸೈಕಲ್ ಹೊಡೆದ ನೆನಪುಗಳನ್ನು ಬಿಚ್ಚಿಟ್ಟು ಮಾತನಾಡಿ ಮನುಷ್ಯನಿಗೆ ಆತ್ಮವಿಶ್ವಾಸ ಮುಖ್ಯ. ಅದರ ಜೊತೆಯಲ್ಲಿ ಗುರಿಯೂ ಇರಬೇಕು. ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಎಂಬ ಗುರಿಯೊಂದಿಗೆ ವೈದ್ಯಕೀಯ ಸಂಘದಿAದ ನಡೆದ ಈ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದಲೇ ನಡೆಸಬೇಕಾಗಿತ್ತು.ಆರೋಗ್ಯವೆ ಭಾಗ್ಯ ಎಂಬ ಮಾತಿನಂತೆ ಎಷ್ಟೆ ಸಂಪತ್ತಿದ್ದರೂ ಉತ್ತಮ ಆರೋಗ್ಯವಿದ್ದರೆ ಮಾತ್ರ ಅದನ್ನು ಅನುಭವಿಸಲು ಸಾಧ್ಯವಿದೆ ಎಂದರು.
ಗುಜರಾತನ ವಡೋರಾದಲ್ಲಿ ನಡೆದ ಮೂರನೆಯ ರಾಷ್ಟ್ರೀಯ ಮಾಸ್ಟರ್ ಕ್ರೀಡಾಕೂಟದ ವೇಟೆ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಂಗಾರ ಪದಕ ಪಡೆದು ೨೦೨೦ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಅನಿಲ್ ನಾಯ್ಕ, ರಾಜ್ಯ , ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕಗಳನ್ನು ಗಳಿಸಿದ ಡಾಕ್ಟರ್ ನಾಜಿಮ್ ಖಾನ್,ಭೂಮಿ ರಾಷ್ಟ್ರಮಟ್ಟದ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಪಡೆದ ಕುಮಟಾದ ಅಳ್ವೆಕೋಡಿಯ ದಯಾನಿಲಯ ವಿಕಲಚೇತನ ಶಾಲೆಯ ವಿದ್ಯಾರ್ಥಿ ನಂದನ್ ಹಾಗೂ ಕುಮಟಾದ ಅಲ್ವೇಕೊಡಿ ದಯಾ ನಿಲಯ ಶಾಲೆಯ ಮುಖ್ಯಸ್ಥ ಸಿರಿಲ್ ಇವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ವಿವಿಧ ವಯೋಮಾನದ ಮಕ್ಕಳಿಗೆ ಸ್ಲೋ ಸೈಕ್ಲಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕುಮಟಾ ಹೆಲ್ತ್ ಪಾಯಿಂಟ್ ನ ಅನಿಲ್ ನಾಯ್ಕ, ಉದ್ಯಮಿ ಕಿಶನ್ ವಾಳ್ಕೆ,ಡಾಕ್ಟರ್ ನಮೃತಾ ಶಾನಭಾಗ,ಭಾರತೀಯ ವೈದ್ಯಕೀಯ ಸಂಘ ಕುಮಟಾ ಘಟಕದ ಕಾರ್ಯದರ್ಶಿ ಡಾಕ್ಟರ್ ಅಶ್ವಿನಿ ಶಾನಭಾಗ್ ,ಭಾರತೀಯ ವೈದ್ಯರ ಸಂಘದ ಉತ್ತರ ಕನ್ನಡ ವಿಭಾಗದ ಅಧ್ಯಕ್ಷರಾದ ಡಾಕ್ಟರ್ ಸಂಜಯ್ ಪಟಗಾರ ಹಾಗೂ ಡಾಕ್ಟರ್ ನಜೀಮ್ ಇನ್ನಿತರರು ಇದ್ದರು.
ಮಂಜುನಾಥ ಭಂಡಾರಿ ನಿರೂಪಿಸಿದರು.
ಕುಮಾರಿ ಅಕ್ಷತಾ ಮತ್ತು ಚೇತನಾ ಪ್ರಾರ್ಥಿಸಿದರು. ಡಾಕ್ಟರ್ ಅಶ್ವಿನಿ ಶಾನಭಾಗ್.ಸ್ವಾಗತಿಸಿದರು. ಡಾಕ್ಟರ್ ನಮೃತಾ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾಕ್ಟರ್ ಸಂಜಯ್ ಪಟಗಾರ ವಂದಸಿದರು.

error: