December 21, 2024

Bhavana Tv

Its Your Channel

ಭಟ್ಕಳ ತಾಲೂಕಿನ ೨೯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶಾಸಕ ಸುನೀಲ ನಾಯ್ಕರಿಂದ ಚೆಕ್ ವಿತರಣೆ

ಭಟ್ಕಳ: ಶಾಸಕ ಸುನೀಲ ನಾಯ್ಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೨೯ ಫಲಾನುಭವಿಗಳಿಗೆ ಚೆಕನ್ನು ಮಂಗಳವಾರದAದು ಭಟ್ಕಳ ತಾಲೂಕಾ ಪಂಚಾಯತನಲ್ಲಿ ವಿತರಿಸಿದರು. ತಾಲೂಕಿನಲ್ಲಿನ ಕಡು ಬಡವರಿಗೆ, ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ, ದಿವ್ಯಾಂಗ, ಅಂಗವಿಕಲತೆ ಹೊಂದಿದ ಫಲಾನುಭವಿಗಳು ಶಾಸಕ ಸುನೀಲ ನಾಯ್ಕರಲ್ಲಿ ಅರ್ಜಿ ಸಲ್ಲಿಸಿದ್ದರು. ಇಂತಹವರನ್ನು ಪರಿಗಣಿಸಿ ಭಟ್ಕಳದಲ್ಲಿನ ಅಗತ್ಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟು ೨೯ ಫಲಾನುಭವಿಗಳಿಗೆ ಮಂಗಳವಾರದAದು ಚೆಕ್ ವಿತರಿಸಿದರು. ಒಟ್ಟು ೨೯ ಫಲಾನುಭವಿಗಳಿಗೆ ೫.೭೦ ಲಕ್ಷ ರೂ. ಪರಿಹಾರ ಧನವನ್ನು ನೀಡಲಾಯಿತು.

error: