April 4, 2025

Bhavana Tv

Its Your Channel

ಬಿಜೆಪಿ ಸರ್ಕಾರದ ವಿರೋಧ ಸಿಐಟಿಯು ಜಿಲ್ಲಾ ಸಮಿತಿ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಮಂತ್ರಿಗಳಿಗೆ ಮನವಿ

ಕಾರವಾರ: ತೀವ್ರಬೆಲೆ ಏರಿಕೆ, ರೈತ ವಿರೋಧಿ ೩ ಕೃಷಿ ಕಾಯ್ದೆಗಳು, ಮಾಲಿಕಪರವಾದ ೪ ಕಾರ್ಮಿಕ ಸಂಹಿತೆಗಳು, ಖಾಸಗಿಕರಣ ಉತ್ತೇಜಿಸುವ ಬಾಲ್ಯಾವಸ್ಥೆಯ ಶಿಕ್ಷಣ ಕಸಿಯುವ ಹೊಸ ಶಿಕ್ಷಣ ನೀತಿ, ನಿರುದ್ಯೋಗ ಹೆಚ್ಚಳ, ದುಡಿಯುವ ಜನರ ನಿರ್ಲಕ್ಷಿಸಿದ ಕೇಂದ್ರ ಬಜೆಟ್, ಸಂವಿಧಾನಾತ್ಮಕ ಸ್ವಾತಂತ್ರ‍್ಯದ ಮೇಲಿನ ಕುತ್ಸಿತ ಧಾಳಿ ವಿರೋಧಿಸಿ, ರಾಜ್ಯ ಸರ್ಕಾರದ ಬಜೆಟ್ ದುಡಿಯುವ ವರ್ಗದ ಪರವಾಗಿ ಬರಲು ಆಗ್ರಹಿಸಿ ಕಾರವಾರದಲ್ಲಿ ನಡೆದ ಪ್ರತಿಭಟನಾ ನಡಿಗೆಯನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರo ಕೆಂಪು ಬಾವುಟ ನೀಡಿ ಉದ್ಘಾಟಿಸಿದರು.

ಜಿಲ್ಲಾ ಅಧ್ಯಕ್ಷರಾದ ತಿಲಕ ಗೌಡ, ಪ್ರಧಾನ ಕಾರ್ಯದರ್ಶಿ ಸಿ ಆರ್ ಶಾನಭಾಗ್, ಪದಾಧಿಕಾರಿಗಳಾದ ಯಮುನಾ ಗಾಂವ್ಕರ್, ಜಗದೀಶ್ ನಾಯ್ಕ, ಗಂಗಾ ನಾಯ್ಕ ಮತ್ತು ಜಿಲ್ಲಾ ಸಮಿತಿ ಸದಸ್ಯರು, ಕಾರವಾರ ತಾಲೂಕಿನ ಸಂಚಾಲಕರಾದ ಮಂಜುಳಾ ಕಾಣಕೋಣಕರ್ ಎಸ್.ಎಫ್. ಐ ಜಿಲ್ಲಾ ಸಂಚಾಲಕ ಗಣೇಶ್ ರಾಠೋಡ ನೇತೃತ್ವದಲ್ಲಿ ನೂರಾರು ಜನರು ನಡಿಗೆಯಲ್ಲಿ ಹಾಜರಿದ್ದರು. ಕಾರ್ಮಿಕ ಮಂತ್ರಿಗಳು ಉ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾರ್ಚ್ ೪ ರ ಮೂವತ್ತೊಂದು ಬೇಡಿಕೆಗಳಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು..

error: