May 15, 2024

Bhavana Tv

Its Your Channel

ಎಸಿಬಿ ಅಧಿಕಾರಿಗಳ ದಾಳಿ, ಸಹಕಾರಿ ಸಂಘಗಳ ಹಿರಿಯ ನಿಬಂಧಕ ಭಟ್ಕಳ ಬೆಳಕೆಯ ಭಾಸ್ಕರ್ ನಾಯ್ಕ ಲಂಚದ ಹಣದ ಸಮೇತ ಬಂಧನ,

ಭಟ್ಕಳ :-ಸಂಘದ ನೊಂದಣಿ ಮಾಡಲು ಲಂಚ ಕೇಳಿದ್ದ ಸಹಕಾರಿ ಸಂಘಗಳ ಹಿರಿಯ ನಿಬಂಧಕ ಭಟ್ಕಳ ಬೆಳಕೆಯ ಭಾಸ್ಕರ್ ನಾಯ್ಕ ರನ್ನು ಕಾರವಾರದ ಎಸಿಬಿ ಅಧಿಕಾರಿಗಳು ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ಎ.ಸಿಬಿ ಡಿ.ಎಸ್.ಬಿ ಮಂಜುನಾಥ ಕೌರಿ ಇವರ ಮಾರ್ಗದರ್ಶನದಲ್ಲಿ ,ಅಲೀ ಶೇಖ್.ಪಿ.ಐ ,ಅನಿಸ್ ಅಹ್ಮದ್ ಮುಜಾವರ್, ಹಾಗೂ ಸಹಾಯಕ ಸಿಬ್ಬಂದಿಗಳಾದ ರಾಜೇಶ್ ಪ್ರಭು,ಕೃಷ್ಣ,ಗಜೇಂದ್ರ,ಶಿವಕುಮಾರ್ ,ಮುಂಜುನಾಥ್ ,ಮೆಹಬೂಬ್ ಅಲಿ ದಾಳಿಯಲ್ಲಿ ಭಾಗವಹಿಸಿದ್ದರು.
ಸಂಘದ ನೊಂದಣಿಗೆ ಒಂದುವರೆ ಸಾವಿರ ಶುಲ್ಕವಿದ್ದು, ಇದರೊಂದಿಗೆ ಮೂರು ಸಾವಿರ ಹೆಚ್ಚಿನ ಹಣವನ್ನು ದೂರುದಾರ ಹಣಕೋಣದ ಸುನಿಲ್ ಎಂಬುವವರ ಬಳಿ ಅಧಿಕಾರಿ ಭಾಸ್ಕರ್ ನಾಯ್ಕ ಕೇಳಿದ್ದರು.
ಈ ಸಂಬoಧ ACB ಕಚೇರಿಗೆ ಸುನಿಲ್ ಹಣಕೋಣ ಎಂಬುವವರು ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಒಂದೂವರೆ ಸಾವಿರ ಲಂಚ ಹಣ ನೀಡುವಾಗ, ಕಾರವಾರ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬ್ರಷ್ಟರ ಕೂಪ ಸಹಕಾರ ಸಂಘಗಳ ನೊಂದಣಿ ಇಲಾಖೆ!

ಇಡೀ ಜಿಲ್ಲೆಯಲ್ಲಿ ಯಾವುದೇ ಸಂಘ ನೊಂದಣಿ ಮಾಡಬೇಕು ಎಂದರೆ ಈ ಕಚೇರಿಯಲ್ಲಿ ಅಧಿಕಾರಿಗಳಿಗೆ ಒಂದೊAದು ಟೇಬಲ್ ಗೆ ಇಂತಿಷ್ಟು ಹಣ ನೀಡಬೇಕು. ಈ ಕಚೇರಿಯಲ್ಲಿ ಮಹಿಳಾ ಅಧಿಕಾರಿ ಹಾಗೂ ಭಟ್ಕಳ ಬೆಳಕೆ ಮೂಲದವರಾದ ಈ ಮಹಾಶಯ ಹಣ ನೀಡದೆ ಕೆಲಸವನ್ನೇ ಮಾಡಿ ಕೊಡುತ್ತಿರಲಿಲ್ಲ ಎಂಬ ದೂರುಗಳು ಹಲವು ವರ್ಷದಿಂದ ಕೇಳಿ ಬರುತ್ತಿದೆ.
ಲಂಚ ಪಡೆದ ಹಣದಲ್ಲಿ ಇನ್ನೂರು ರೂ ಡಿಸ್ಕೌಂಟ್ .!
ಭಟ್ಕಳದ ನಿವಾಸಿಯಾಗಿರುವ ಈ ಹಿರಿಯ ಅಧಿಕಾರಿ ಲಂಚದ ಹಣ ದಲ್ಲೂ ಡಿಸ್ಕೌಂಟ್ ನೀಡಿದ್ದಾರೆ. ಮೊದಲು ನೊಂದಣಿ ಶುಲ್ಕ ಸೇರಿ ಮೂರುಸಾವಿರ ಹಣ ಲಂಚ ಕೇಳಿದ್ದರು. ಮೊದಲು ಶುಲ್ಕದ ಬಾಬ್ತು ಒಂದೂವರೆ ಸಾವಿರ ನೀಡಲಾಗಿತ್ತು. ನಂತರ ಲಂಚದ ಮೊತ್ತದ ಮೊದಲ ಕಂತಿನ ಒಂದೂವರೆ ಸಾವಿರ ರೂ. ನನ್ನು ನೀಡಲಾಗಿತ್ತು. ಈ ವೇಳೆ ಇನ್ನೂರು ರೂಪಾಯಿಯನ್ನು ಲಂಚದ ಹಣದಲ್ಲಿ ಮರಳಿಸಿ ಕಡಿಮೆ ತೆಗೆದುಕೊಂಡಿರುವುದಾಗಿ ದೂರುದಾರರಿಗೆ ಹೇಳಿದ್ದ. ಒಟ್ಟಿನಲ್ಲಿ ಹಲವು ವರ್ಷದಿಂದ ಸಂಘ ನೊಂದಣಿ ಕಚೇರಿಯಲ್ಲಿ ಬ್ರಷ್ಟಾಚಾರ ವಿದ್ದರೂ ತೊಂದರೆಗೊಳಗಾದವರು ದೂರು ನೀಡಿರಲಿಲ್ಲ. ಇದೇ ಮೊದಲಬಾರಿಗೆ ದೂರು ನೀಡಿ ಅಲ್ಲಿನ ಬ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ.

error: