ಭಟ್ಕಳ: ಸ್ಥಳೀಯವಾಗಿ ಸ್ಕೂಬಾ ಡೈವಿಂಗ್ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಾದ ಅಗತ್ಯತೆ ಇದ್ದು, ಅಪಪ್ರಾಚಾರದಿಂದ ಸ್ಥಳೀಯರು ಸ್ಕೂಬಾ ಡೈವಿಂಗ್‌ನಿAದ ದೂರವೇ ಉಳಿದ್ದರು ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಮುರ್ಡೇಶ್ವರದ ಆರ್.ಎನ್.ಎಸ್. ರೆಸಿಡೆನ್ಸಿಯ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಎರ್ಪಡಿಸಿದ್ದ ಸ್ಕೂಬಾ ಡೈವಿಂಗ್ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುರ್ಡೇಶ್ವರದ ಸ್ಕೂಬಾ ಡೈವಿಂಗ್ ಹೆಸರು ಶ್ರೀಲಂಕಾ ಸ್ಕೂಬಾ ಡೈವಿಂಗ್ ಕಚೇರಿಯಲ್ಲಿ ಕೂಡಾ ಇರುವುದು ನಮ್ಮ ಜಿಲ್ಲೆಗೊಂದು ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಪ್ರಚಾರದ ಬಗ್ಗೆ ಸರಕಾರದಿಂದ ಇನ್ನೂ ಹೆಚ್ಚಿನ ಒತ್ತುಕೊಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಮಾತನಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದ ಜೊತೆಯಲ್ಲಿ ಖಾಸಗೀಯವರೂ ಕೂಡಾ ಕೈಜೋಡಿಸಿದಲ್ಲಿ ಅನುಕೂಲವಾಗುವುದು. ನೇತ್ರಾಣಿ ಸ್ಕೂಬಾ ಡೈವಿಂಗ್ ರಾಜ್ಯದ ಏಕೈಕ ಸ್ಕೂಬಾ ಡೈವಿಂಗ್ ಕ್ರೀಡೆಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರತಿ ಎರಡು ವರ್ಷಗಳಿಗೊಮ್ಮೆ ಉತ್ಸವ ನಡೆಸುವ ಕುರಿತು ಘೋಷಿಸಿದರು. ಗೋವಾ ಹಾಗೂ ಅಂಡಮಾನ್‌ಗಿAತಲೂ ಹೆಚ್ಚಿನ ಪ್ರವಾಸೋಧ್ಯಮ ಇಲ್ಲಿ ಸಾದ್ಯವಿದೆ ಎಂದೂ ಅವರು ಅಭಿಪ್ರಾಯ ಪಟ್ಟರು.
ಗಾಳಿಪಟ ಉತ್ಸವ, ಸ್ಕೂಬಾ ಡೈವಿಂಗ್ ಉತ್ಸವ ನಂತರ ಕಯಾಕಿಂಗ್ ಹಾಗೂ ಹಾರ್ನಬಿಲ್ ಉತ್ಸವ ಮಾಡಲಾಗುವದು ಎಂದ ಅವರು ಪ್ರವಾಸೋಧ್ಯಮಕ್ಕೆ ಸುರಕ್ಷತೆ ಹಾಗೂ ನಂಬಿಕೆ ಮುಖ್ಯವಾಗಿದ್ದು, ಖಾಸಗಿಯವರು ಉತ್ಸವ ನಡೆಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಎರಡು ವರ್ಷದ ಹಿಂದೆ ನೇತ್ರಾಣಿ ಬಳಿ ಸ್ಕೂಬಾ ಡೈವಿಂಗ್ ಮಾಡಲಾಗಿತ್ತು. ಆಗ ಜನರಲ್ಲಿ ತಿಳುವಳಿಕೆ ಕೊರತೆ ಇತ್ತು. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಮಸ್ಯೆಗಳು ದೂರವಾದವು. ಈಗ ಹೊಸತನ ತರಲಾಗಿದೆ. ಪ್ರಸ್ತುತ ದಿನಕ್ಕೆ ೬೦ಜನರಿಗೆ ಸ್ಕೂಬಾ ಡೈವಿಂಗ್ ಮಾಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ೧೦೦ಜನರಿಗೆ ಅವಕಾಶ ಮಾಡಲಾಗುತ್ತದೆ. ಗೋವಾ ಹಾಗೂ ಅಂಡಮಾನ್ ಗಿಂತಲೂ ಹೆಚ್ಚಿನ ಪ್ರವಾಸೋಧ್ಯಮ ಇಲ್ಲಿ ಸಾದ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಕಾರವಾರ ಅರಣ್ಯ ವಿಭಾಗದ ಡಿ.ಎಫ್.ಒ. ವಸಂತ ರೆಡ್ಡಿ ವಿಶೇಷ ಉಪನ್ಯಾಸ ನೀಡಿ, ನೇತ್ರಾಣಿ ಬಳಿ ೪೦ ಬಗೆಯ ಹವಳಗಳಿವೆ. ೮೯ ಬಗೆಯ ಮೀನುಗಳಿವೆ. ಸಮುದ್ರದ ಆಳ ಜಗತ್ತು ನೋಡಲು ಸ್ಕೂಬಾ ಡೈವಿಂಗ್ ಉತ್ತಮವಾಗಿದೆ ಎಂದರು.
ಭಟ್ಕಳ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಉಪಸ್ಥಿತರಿದ್ದರು. ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶದ ಪುರುಷೋತ್ತಮ ನಿರ್ವಹಿಸಿದರು. ಭಟ್ಕಳ ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ನೇತ್ರಾಣಿ ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ಸುಮಾರು ೬೦ಕ್ಕೂ ಅಧಿಕ ನಾಗರೀಕರು, ಪತ್ರಕರ್ತರನ್ನು ಕರೆದೊಯ್ದು ಸ್ಕೂಬಾ ಡೈವಿಂಗ್ ಮಾಡಿಸಲಾಯಿತು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.