April 13, 2024

Bhavana Tv

Its Your Channel

ಕೆನರಾ ಕಾಲೇಜು ಸೊಸೈಟಿಯ ಡಾ ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ

ಕುಮಟಾ

ಕೆನರಾ ಕಾಲೇಜು ಸೊಸೈಟಿಯ ಡಾ ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಬಾಳಿಗಾ ಮಹಾವಿದ್ಯಾಲಯದಲ್ಲಿ ಜರುಗಿತು. ಶಾಲೆಯ ಕ್ರೀಡಾಕೂಟದಲ್ಲಿ ಹಾಗೂ ಇತರ ಸ್ಪರ್ಧಾ ಚಟುವಟಿಕೆ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದ ಪುಟ್ಟ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ ಎ ವಿ ಬಾಳಿಗಾ ಮಹಾವಿದ್ಯಾಲಯದ ಪಿ ಯು ವಿಭಾಗದ ಪ್ರಿನ್ಸಿಪಾಲ್ ವೀಣಾ ಕಾಮತ್ ೨೦ ವಯಸ್ಸಿನ ವರೆಗೆ ಯಾವ ಒತ್ತಡವೂ ಇಲ್ಲದೇ ಮಕ್ಕಳು ಖುಷಿಯಿಂದ ಇರುತ್ತಾರೆ. ಇವತ್ತು ಈ ಮಕ್ಕಳೂ ಅಷ್ಟೇ ಬಹುಮಾನ ಪಡೆಯುವ ಖುಷಿ ಯಲ್ಲಿ ನಿರತರಾಗಿದ್ದಾರೆ.. ಈ ಚಿಕ್ಕ ಮಕ್ಕಳಿಗೆ ತಾಯಿ ಪ್ರೀತಿ ನೀಡಿ ಬಾಳಿಗಾ ಪ್ರಾಥಮಿಕ ಶಾಲೆಯ ಶಿಕ್ಷಕರು ಉತ್ತಮವಾಗಿ ನೋಡಿಕೊಂಡು ಉತ್ತಮ ಶಿಕ್ಷಣ ಸಂಸ್ಕಾರ ನೀಡುತ್ತಿದ್ದಾರೆ.. ಬೆಳಿಗ್ಗೆ ಮಧ್ಯಾಹ್ನ ಪ್ರಾರ್ಥನೆ ದೇವರ ಸ್ತುತಿ ಹೀಗೆ ದೇಶಾಭಿಮಾನ ವನ್ನೂ ಮಕ್ಕಳಿಗೆ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ.
ಪಾಲಕರು ಮಕ್ಕಳ ಬೆಳವಣಿಗೆಯ ಬಗ್ಗೆ ವಿಶೇಷ ಗಮನ ಇಡಬೇಕು ಇಂದಿನ ಯುವಜನತೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ದಿನನಿತ್ಯ ಪತ್ರಿಕೆ ಟಿವಿ ಮುಖಾಂತರ ನೋಡುತ್ತೇವೆ ಅಂತಹ ಕೆಟ್ಟ ಪ್ರವರ್ತಿಯಿಂದ ದೂರ ಇರುವಂತೆ ಮಾಡಬೇಕು.. ಅವರಲ್ಲಿ ಒಳ್ಳೆಯ ಸಂಸ್ಕಾರ ತುಂಬಬೇಕು.. ಗುರು ಹಿರಿಯರು ಪಾಲಕರ ಬಗ್ಗೆ ಗೌರವ ಪ್ರೀತಿ ಸದಾ ಇರುವಂತೆ ಅವರ ಮನಸ್ಸಲ್ಲಿ ಸುವಿಚಾರ ಬೆಳೆಸಬೇಕು.. ಎಂದರು
ಕೆನರಾ ಕಾಲೇಜು ಸೊಸೈಟಿ ಕಾರ್ಯದರ್ಶಿ ವಿನೋದ ಪ್ರಭು ಇಂದು ನಮ್ಮ ಈ ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸಿರುವುದು ನಮಗೆ ತುಂಬಾ ಸಂತೋಷ ಉಂಟು ಮಾಡಿದೆ. ನಾವು ಇಷ್ಟು ಸಂಖ್ಯೆಯಲ್ಲಿ ಪಾಲಕರು ಆಗಮಿಸುತ್ತಾರೆ ಎಂದು ನಿರೀಕ್ಷೆ ಇಲ್ಲದೇ ನಮ್ಮ ಕಾಲೇಜಿನ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವು ಆದರೆ ಪಾಲಕರಿಗೆ ಹೊರಗೆ ನಿಂತು ಕಾರ್ಯಕ್ರಮ ವಿಕ್ಷಿಸುವಂಥಾದದ್ದು ನಮಗೆ ಬೇಸರ ತಂದಿದೆ ಕ್ಷಮೆ ಇರಲಿ ಎನ್ನುತ್ತ ಮುಂದಿನ ವರ್ಷದಿಂದ ಹೊರಗಡೆ ವೇದಿಕೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ.
ಮುಂದಿನ ವರ್ಷ ಐದನೇ ತರಗತಿ ಆರಂಭಿಸಲಾಗುತ್ತಿದ್ದು ಎಲ್ಲ ಪಾಲಕರು ಇಷ್ಟು ವರ್ಷ ನಮಗೆ ನೀಡಿದ ಸಹಕಾರ ಮುಂದುವರೆಸಿ ನಿಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸರ್ವಾಂಗೀಣ ಪ್ರಗತಿಗಾಗಿ ಉತ್ತಮ ಶಿಕ್ಷಕ ವೃಂದ ಹಾಗೂ ಉತ್ತಮ ಆಡಳಿತ ಮಂಡಳಿ ಇರುವ ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಿ ಸಹಕಾರ ನೀಡಿ ಎಂದರು..
ಕೆನರಾ ಕೊಲೆಜ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಎ ಪಿ ಶಾನಭಾಗ, ಶಾಲೆಯ ಮುಖ್ಯಾಧ್ಯಾಪಕಿ ಪ್ರಿಯಾ ನರ್ಹೋನಾ ವೇದಿಕೆ ಮೇಲೆ ಉಪಸ್ಥಿತರಿದ್ದರು..
ವಿನೋದ ಪ್ರಭು, ಎ ಪಿ ಶಾನಭಾಗ ಹಾಗೂ ಪ್ರಿಯಾ ನರ್ಹೋನಾ ಮಕ್ಕಳಿಗೆ ಬಹುಮಾನ ವಿತರಿಸಿದರು
ನಂತರ ಎಲ್ ಕೆಜಿ ಮಕ್ಕಳ ಹಾಗೂ ಇತರ ತರಗತಿ ಮಕ್ಕಳ ಹಾಡು ನೃತ್ಯ ನಾಟಕ ನಡೆಯಿತು.. ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು. ಎಲ್ ಕೆ ಜಿ ಇಂದ ನಾಲ್ಕನೆ ತರಗತಿ ಯ ವರೆಗಿನ ಮಕ್ಕಳ ಪಾಲಕರು ಉಪಸ್ಥಿತರಿದ್ದರು..

error: