April 20, 2024

Bhavana Tv

Its Your Channel

ಹುನಗುಂದ-ಸರ್ಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ

ಹುನಗುಂದ-ಸರ್ಕಾರಿ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಮತ್ತು ಪಾನಮತ್ತನಾಗಿ ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ಕಿರುಕುಳ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಎಸ್.ಜಿ.ಕಮ್ಮಾರ ಅವರನ್ನು ತಕ್ಷಣವೇ ಅಮಾನತ್ತು ಮಾಡುವಂತೆ ಒತ್ತಾಯಿಸಿ ಶುಕ್ರವಾರ ಉರ್ದು ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಸಮುದಾಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡ ಮುಕ್ತಾರ ಲೈನ್ ಮಾತನಾಡಿ ಉರ್ದು ಹೈಸ್ಕೂಲ್‌ನ ಚಿತ್ರಕಲಾ ಶಿಕ್ಷಕ ಎಸ್.ಜಿ.ಕಮ್ಮಾರ ನಿತ್ಯ ಮಧ್ಯಪಾನ ಮಾಡಿ ಶಾಲೆಗೆ ಬಂದು ಅವಾಚ್ಯ ಶಬ್ದಗಳನ್ನು ಬಳಿಸಿ ಅಲ್ಲೀನ ವಿದ್ಯಾರ್ಥಿನಿಯರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ನೀಡುತ್ತಿದ್ದು.ಅಷ್ಟೆಯಲ್ಲ ಕ್ಲಾಸ್‌ನಲ್ಲಿ ಮೋಬೈಲ್ ಬಳಿಸಿ ವಿದ್ಯಾರ್ಥಿನಿಯರ ವಿಡಿಯೋ ಮಾಡೋದು ಅವರಿಗೆ ಅಶ್ಲೀಲವಾಗಿ ಮಾತನಾಡುವುದು ಬಹಳ ದಿನಗಳಿಂದ ಮಾಡುತ್ತಾ ಬರುತ್ತಿದ್ದು ಇದರ ಬಗ್ಗೆ ಸಾಕಷ್ಟು ಬಾರಿ ಮೌಖಿಕವಾಗಿ ಹೇಳಿದರು ಅವರಿಗೆ ಬುದ್ದಿ ಬಂದಿಲ್ಲ ಅದಕ್ಕಾಗಿ ಇಂತಹ ಶಿಕ್ಷಕರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತೆದೆ ಈ ರೀತಿ ಶಿಕ್ಷಕರ ದುವರ್ತನೆಯಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆಂದು ಎಲ್ಲ ಪಾಲಕರ ಆರೋಪವಿದ್ದು.ಅದಕ್ಕಾಗಿ ತಕ್ಷಣವೇ ಚಿತ್ರಕಲಾ ಶಿಕ್ಷಕ ಕಮ್ಮಾರ ಅವರನ್ನು ಅಮಾನತ್ತು ಮಾಡಬೇಕು ಇಲ್ಲದಿದ್ದರೇ ಅವರ ವಿರುದ್ದ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು.
ಮಹ್ಮದರಫೀಕ್ ರಕ್ಕಸಗಿ ಮಾತನಾಡಿ ಕಳೆದ ೧೬ ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಶೌಚಾಲಯ,ಶುದ್ದ ಕುಡಿಯುವ ನೀರು,ವಿದ್ಯುತ್ ಸೇರಿದಂತೆ ಅನೇಕ ಮೂಲಭೂತ ಸೌರ‍್ಯವಿಲ್ಲದೇ ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ೭೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಹತ್ತಾರು ಸಮಸ್ಯೆಯಲ್ಲಿಯೇ ಕಾಲ ಕಳಿಯುವಂತಾಗಿದೆ.ಹತ್ತು ವರ್ಷಗಳಿಂದ ಈ ಪ್ರೌಢ ಶಾಲೆಗೆ ಖಾಯಂ ಶಿಕ್ಷಕರಿಲ್ಲದೇ ಆಗೊಮ್ಮೆ ಇಗೊಮ್ಮೆ ಅತಿಥಿ ಶಿಕ್ಷಕರ ಕರೆಯಿಸಿ ಪಾಠ ಬೋಧನೆ ಮಾಡುತ್ತಿದ್ದು.ಮಕ್ಕಳ ಕಲಿಕೆಗೆ ಕೊಡಲೆ ಪೆಟ್ಟು ನೀಡಿದಂತಾಗಿದೆ.ಇನ್ನು ಶಾಲೆಯ ಅಭಿವೃದ್ದಿ ಮಂಡಳಿಯ ಸೌಭಾಗ್ಯವಂತೂ ಮೊದಲೇ ಇಲ್ಲವಾಗಿದೆ.ಇದರಿಂದ ಇಲ್ಲಿರುವ ಶಿಕ್ಷಕರು ತಮ್ಮ ಮನಸ್ಸಿಗೆ ಬಂದAತೆ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದು ಅವರಿಗೆ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯರಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದು.ಈ ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಬಗೆ ಹರಿಸಬೇಕು ಇಲ್ಲದಿದ್ದರೇ ಬೀದಿಗಿಳಿದು ಹೋರಾಟ ಮಾಡಬೇಕಾಗುವುದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುರ್ತುಜಾ ಫಿರಜಾದೆ, ಸಿರಾಜುಲ್‌ಹಸನ್ ಲೈನ್, ರಿಜವಾನ ಪಟೇಲ್, ಸೋಹೇಲ್ ಲೈನ್, ಗುಡುಸಾಬ ಗಡೇದ ಮತ್ತು ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು..
ಬಾಕ್ಸ್ sಸುದ್ದಿ-ಶಾಲೆಯ ಚಿತ್ರಕಲಾ ಶಿಕ್ಷಕ ಮಧ್ಯಪಾನ ಮಾಡಿ ಶಾಲೆಗೆ ಬಂದು ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದ್ದಲ್ಲದೇ ಮೋಬೈಲ್‌ನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರಕರಣ ಮಾಡುತ್ತಾರೆ.ಇದ್ದನೆಲ್ಲಾ ಸಹಿಸಿಕೊಂಡು ಶಿಕ್ಷಕರು ಇಂದಿಲ್ಲಾ ನಾಳೆ ಸರಿಯೋಗಬಹುದು ಎಂದು ಸುಮ್ನಿದ್ದರೂ ನಿತ್ಯ ಅದೇ ಕೆಲಸವನ್ನು ಮುಂದುವರಿಸಿದ್ದಾರೆ.ಈ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ.ಶಿಕ್ಷಕನ ಮೇಲೆ ಕ್ರಮ ಜರುಗಿಸಿ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು. ಉರ್ದು ಪ್ರೌಢ ಶಾಲಾ ವಿದ್ಯಾರ್ಥಿಗಳು.

error: