December 4, 2024

Bhavana Tv

Its Your Channel

ಪರಿಸರದ ಬದಲಾದ ವರ್ತನೆ ಹಾಗೂ ದುಸ್ಥಿತಿಯ ಬಗ್ಗೆ ಮಕ್ಕಳು ಅರಿತುಕೊಳ್ಳುವುದು ಮಾತ್ರವಲ್ಲದೇ ಪರಿಸರಕ್ಕೆ ಪೂರಕವಾಗಿ ಬದುಕುವುದನ್ನು ಕಲಿತುಕೊಳ್ಳಬೇಕು – ರತ್ನಾಕರ ನಾಯ್ಕ

ಕುಮಟಾ: ಪರಿಸರದ ಬದಲಾದ ವರ್ತನೆ ಹಾಗೂ ದುಸ್ಥಿತಿಯ ಬಗ್ಗೆ ಮಕ್ಕಳು ಅರಿತುಕೊಳ್ಳುವುದು ಮಾತ್ರವಲ್ಲದೇ ಪರಿಸರಕ್ಕೆ ಪೂರಕವಾಗಿ ಬದುಕುವುದನ್ನು ಕಲಿತುಕೊಳ್ಳಬೇಕು ಎಂದು ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಅಭಿಪ್ರಾಯಪಟ್ಟರು.

ಅವರು ಶನಿವಾರ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಆಶ್ರಯದಲ್ಲಿ ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್?ನಲ್ಲಿ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯನ್ನೇ ನಂಬಿ ನಡೆಯುವ ಬದುಕು ನಮ್ಮದು, ಆದರೆ ಪ್ರಕೃತಿಯ ಮೇಲೆ ನಾವು ಮಾಡುತ್ತಿರುವ ದೌರ್ಜನ್ಯ ಮಿತಿಮೀರಿದ್ದು ಪ್ರಕೃತಿ ಅದನ್ನು ಸಹಿಸಲಾಗದ ಸ್ಥಿತಿ ತಲುಪಿದೆ. ಅಂತರ್ಜಲ ವೃದ್ಧಿಗೆ ಗಿಡಮರ ಬೆಳೆಸುವುದು ಬಹಳ ಮುಖ್ಯ ಎಂದರು.

ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಡಾ. ಎಂ..ದಿನಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ರತ್ನಶ್ರೀ ಜೊಸೆಫ್, ಜಿ.ಎಂ. ರೆಬೆಲ್ಲೋ ಉಪನ್ಯಾಸ ನೀಡಿದರು. ಶಿಕ್ಷಣ ಸಂಯೋಜಕ ಪಿ.ಎಂ.ಮುಕ್ರಿ ಇದ್ದರು. ಅಂತರ್ಜಲ ಜಾಗೃತಿ ಮಾಹಿತಿಯ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.

ಅಂತರ್ಜಲ ಸಂರಕ್ಷಣೆ ಕುರಿತು ನಡೆಸಲಾದ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿ ಬಹುಮಾನ ಪಡೆದರು.

ಈ ಸಂಧರ್ಬದಲ್ಲಿ ಸಮನ್ವಯಾಧಿಕಾರಿ ರೇಖಾ ನಾಯ್ಕ ಬಿಇಓ ರಾಜೇಂದ್ರ ಎಲ್. ಭಟ್ ಇನ್ನಿತರರು ಇದ್ದರು
ವಿದ್ಯಾರ್ಥಿನಿಯರು ಪರಿಸರ ಗೀತೆ ಹಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲ ಶಿವಾನಂದ ಭಟ್ ಸ್ವಾಗತಿಸಿದರು. ಶಿಕ್ಷಕಿ ಸುಧಾ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಂದ ಪಟ್ಟಣದ ಬೀದಿಗಳಲ್ಲಿ ಅಂತರ್ಜಲ ಜಾಗೃತಿ ಜಾಥಾ ನಡೆಯಿತು.

error: