November 30, 2023

Bhavana Tv

Its Your Channel

ಚಿರತೆಯನ್ನು ರಕ್ಷಿಸಲು ಹೋದ ವ್ಯಕ್ತಿಯೋರ್ವರಿಗೆ ಚಿರತೆ ದಾಳಿ

ಕುಮಟಾ: ಶುಕ್ರವಾರ ರಾತ್ರಿ ಅಪಘಾತದಿಂದ ಗಾಯಗೊಂಡ ಚಿರತೆಯನ್ನು ರಕ್ಷಿಸಲು ಹೋದ ವ್ಯಕ್ತಿಯೋರ್ವರಿಗೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರ ತಾಲೂಕಿನ ಬರ್ಗಿ ಬಳಿ ನಡೆದಿದೆ.

ತಾಲೂಕಿನ ಹಿರೇಗುತ್ತಿ ನಿವಾಸಿ ಚಂದ್ರಹಾಸ ನಾಯಕ (ಪಾಪು) ಗಾಯಗೊಂಡವರು. ಇವರು ಶುಕ್ರವಾರ ರಾತ್ರಿ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಅಂಕೋಲಾದಲ್ಲಿ ನಡೆಯುತ್ತಿರುವ ವಾಲಿಬಾಲ್ ಪಂದ್ಯಾವಳಿಯನ್ನು ವಿಕ್ಷಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಬರ್ಗಿ ಘಟ್ಟದಲ್ಲಿ ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದಿರುವುದರಿಂದ ಚಿರತೆ ಗಾಯಗೊಂಡು ಹೆದ್ದಾರಿ ಮದ್ಯದಲ್ಲಿ ಮಲಗಿಕೊಂಡಿತ್ತು. ಅದರಲ್ಲೂ ಕೆಲವರು ಹೆದ್ದಾರಿಯಲ್ಲಿ ಗಾಯಗೊಂಡು ಮಲಗಿರುವ ಚಿರತೆಯೊಂದಿಗೆ ಸೆಲ್ಪಿ ಫೋಟೊ ತೆಗೆಯಲು ಮೂಗಿಬಿದಿದ್ದರು. ಚಂದ್ರಹಾಸ ನಾಯಕ ಅವರು ಚಿರತೆಯನ್ನು ರಕ್ಷಿಸುವ ಉದ್ದೇಶದಿಂದ ಚಿರತೆಯನ್ನು ಹಿಡಿದು ಹೆದ್ದಾರಿ ಪಕ್ಕಕ್ಕೆ ಇಡುವ ಕಾರ್ಯಕ್ಕೆ ಮುಂದಾದಾಗ ಚಿರತೆ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದೆ. ಗಾಯಗೊಂಡ ಚಂದ್ರಹಾಸ ನಾಯಕ ಅವರನ್ನು ಕುಮಟಾ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

error: