December 20, 2024

Bhavana Tv

Its Your Channel

ಕೆ.ಎಸ್ ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರ ತಂಡದಿOದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ರಾಮಚಂದ್ರಾಪುರ ಮಠ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರ ತಂಡದಿAದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಲಭಾಗ ಸರಸ್ವತಿ ವಿದ್ಯಾಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ೨ ಗಂಟೆಯಿAದ ಸಂಜೆ ೫ ರ ವರೆಗೆ ಜರುಗಿತು.

ಮಠದ ಪ್ರಮುಖರಾದ ಮಂಜುನಾಥ ಭಟ್ಟ ಸುವರ್ಣಗದ್ದೆ ಮಾತನಾಡಿ, ಅತ್ಯಂತ ಕಡುಬಡವರಿಗೂ ತೀರಾ ಕಡಿಮೆ ವೆಚ್ಚದಲ್ಲಿ ಉನ್ನತ ವೈದ್ಯಕೀಯ ಸೇವೆಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕೆಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ನಡೆಸುತ್ತಿರುವ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.
ಶಿಬಿರದಲ್ಲಿ ಡಾ. ಸಿದ್ದಾರ್ಥ ಶೆಟ್ಟಿ, ಡಾ. ಪ್ರತೀಕ್ಷ ರೈ, ಡಾ. ಸಚ್ಚಿದಾನಂದ ಮಲ್ಯ, ಡಾ. ಶ್ರೀಚರಿತ್ ಶೆಟ್ಟಿ, ಡಾ. ಪ್ರವೀಣ ನಾಯಕ್, ಡಾ. ಕಾರ್ತಿಕ್ ಆರ್. ಐತಾಳ್ ಅವರು
ಸಾಮಾನ್ಯ ವೈದ್ಯಕೀಯ ಸಮಸ್ಯೆಗಳು, ಚರ್ಮರೋಗ, ಎಲುಬು ಮತ್ತು ಕೀಲು ರೋಗ, ಮಕ್ಕಳ ವಿಭಾಗ, ಶಸ್ತ್ರಚಿಕಿತ್ಸೆ ಹಾಗೂ ದಂತ ಖಾಯಿಲೆಗಳಿಗೆ, ಮಂಡಿ ಬದಲಾವಣೆ ಶಸ್ತ್ರ ಚಿಕಿತ್ಸೆ, ಕ್ರೀಡಾಗಾಯಗಳು ಮತ್ತಿತರ ಸಮಸ್ಯೆಗಳಿಗೆ ಸಂಬA?ಸಿ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಪ್ರಮುಖರಾದ ಮುರಳೀಧರ ಪ್ರಭು, ಸತೀಶ್ ಭಟ್ಟ, ಎನ್. ಆರ್ ಮುಕ್ರಿ, ಕೆ.ಎನ್ ಹೆಗಡೆ, ಅರುಣ ಮಣಕಿಕರ, ವಿನಾಯಕ ಹೆಗಡೆಕಟ್ಟೆ, ವಿಶ್ವನಾಥ ಪಂಡಿತ್ ಇನ್ನಿತರರು ಇದ್ದರು.

error: