March 14, 2025

Bhavana Tv

Its Your Channel

ಸುರಿದ ಭಾರಿ ಮಳೆಗೆ ಒಡೆದ ಭದ್ರಾ ಜಲಾಶಯದ ಬಲದಂಡೆಯ ನಾಲೆಯ ತೊಟ್ಟಿಲು ಸೇತುವೆ; ಸ್ಥಳಕ್ಕೆ ಪವಿತ್ರ ರಾಮಯ್ಯ ಭೇಟಿ

ದಾವಣಗೆರೆ ಜಿಲ್ಲೆ ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಲ್ಕುಂದ ಗ್ರಾಮದಲ್ಲಿ ಭದ್ರಾ ಜಲಾಶಯದ ಬಲದಂಡೆಯ ನಾಲೆಯ ತೊಟ್ಟಿಲು ಸೇತುವೆ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಒಡೆದಿದ್ದುದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧ್ಯಕ್ಷರು ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿಪ್ರಾಧಿಕಾರ ಪವಿತ್ರರಾಮಯ್ಯ.

ಈ ಸಂದರ್ಭದಲ್ಲಿ ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು ನೀರಾವರಿ ಇಲಾಖೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ನಾಗೇಶ್ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯರು ವಾಗೀಶ್, ನೀರು ಬಳಕೆದಾರ ಸಂಘದ ಸದಸ್ಯರು ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು

error: