
ತುಮಕೂರು ಮೇ.೮. ಇಂದು ಕೋವಿಡ್ ಮಹಾಮಾರಿಗೆ ಜಗವೇ ತಲ್ಲಣಗೊಂಡಿದ್ದು,ಸಾವು ನೋವುಗಳೇ ಹೆಚ್ಚುತ್ತಿದೆ.ಕೊರೊನಾ ಅಟ್ಟಹಾಸಕ್ಕೆ ಇಂದು ದಕ್ಷ ಮಹಿಳಾ ಶಿಕ್ಷಣ ಅಧಿಕಾರಿ ಶ್ರೀಮತಿ ಕಾಮಾಕ್ಷಿ.ಕೆ.ಎಂ ರವರು ಬಲಿಯಾಗಿದ್ದಾರೆ.ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮದ್ಯಾಹ್ನ ೧೨ ರ ಸುಮಾರಿಗೆ ಕೊನೆ ಉಸಿರೆಳೆದಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆ ಹಾಗೂ ತುಮಕೂರು (ದಕ್ಷಿಣ) ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ಅವರ ದಕ್ಷ ಪ್ರಾಮಾಣಿಕ ಆಡಳಿತದಿಂದ ಜಿಲ್ಲೆಗೆ ಹೆಸರಾಗಿದ್ದರು.ಕಳೆದ ವರ್ಷವಷ್ಟೆ ಚಿತ್ರದುರ್ಗ ಜಿಲ್ಲೆಯ ಸಿ.ಟಿ.ಇ ಶಿಕ್ಷಣ ಸಂಸ್ಥೆಗೆ ಹಿರಿಯ ಪ್ರವಾಚಕರಾಗಿ ವರ್ಗಾವಣೆಗೊಂಡು ಕೆಲಸ ನಿರ್ವಹಿಸುತ್ತಿದ್ದರು.ಅಲ್ಲಿಯೂ ಸಹಾ ಶಿಕ್ಷಕರ ಆನ್‌ಲೈನ್ ನಿಷ್ಟಾ ತರಬೇತಿಯ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಬಾಯಿಸಿ ಎಲ್ಲ ಶಿಕ್ಷಕರ ಮನದಲ್ಲಿ ನೆಲೆಯಾಗಿ ನಿಂತವರಾಗಿದ್ದರು,
ದುರಾದೃಷ್ಟವಶಾತ್ ಇಂದು ಕೋರೊನಾ ಮಹಾಮಾರಿಗೆ ಸಿಲುಕಿ ಮರಣಹೊಂದಿದ ವಿಚಾರ ಕೇಳಿ ಜಿಲ್ಲೆಯ ಎಲ್ಲಾ ಶಿಕ್ಷಕ ಬಳಗದವರು,ಅಧಿಕಾರಿ ವೃಂದದವರು ಕಂಬನಿ ಮಿಡಿದಿದ್ದಾರೆ, ಅಂತೆಯೇ ನಮ್ಮ ತುಮಕೂರು ಜಿಲ್ಲಾ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವೂ ಕೂಡ ಕಂಬನಿ ಮಿಡಿದಿದೆ…ಅಕಾಲಿಕ ಸಾವನ್ನಪಿದ ಶ್ರೀಮತಿ ಕಾಮಾಕ್ಷಿ ಮೆಡಂ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ,ಅವರ ದುಂಖತಪ್ತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ನಮ್ಮ ಫುಲೆ ಶಿಕ್ಷಕಿಯರ ಸಂಘವು ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸುತ್ತಿದೆ.

More Stories
ಸುರಿದ ಭಾರಿ ಮಳೆಗೆ ಒಡೆದ ಭದ್ರಾ ಜಲಾಶಯದ ಬಲದಂಡೆಯ ನಾಲೆಯ ತೊಟ್ಟಿಲು ಸೇತುವೆ; ಸ್ಥಳಕ್ಕೆ ಪವಿತ್ರ ರಾಮಯ್ಯ ಭೇಟಿ
ಎರಡು ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ ಮೇಘನಾ ನಾಯ್ಕ
ಬೇತೂರು – ಕಡಜ್ಜಿ ಗ್ರಾಮದ ನಡುವೆ ಬರುವ ಆರ್-4 ವಿತರಣಾ ನಾಲೆಯಲ್ಲಿ ರೈತರೊಂದಿಗೆ ಪವಿತ್ರ ರಾಮಯ್ಯರವರ ಔತಣಕೂಟ ಕಾರ್ಯಕ್ರಮ