December 20, 2024

Bhavana Tv

Its Your Channel

ರೋಬೋಟ್ ನಿಂದ ಕೊರೋನಾ ಮಹಾಮಾರಿಯ ಅಟ್ಟಹಾಸ ತಡೆಗೆ ಹೈಡ್ರೋಕ್ಲೋರಿನ್ ದ್ರಾವಣವನ್ನು ಸಿಂಪಡಣೆ.

ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಡೀ ವಿಶ್ವವನ್ನೇ ಬೆಂಬಿಡದ ಭೂತದಂತೆ ಕಾಡುತ್ತಿರುವ ಕೊರೋನಾ ಅಟ್ಟಹಾಸದ ತಡೆಗೆ ನಾಗರಿಕರು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಬೇಕು. ಕೊರೋನಾ ಸೂಕ್ಷ್ಮ ವೈರಾಣುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಹೈಡ್ರೋಕ್ಲೋರಿನ್ ದ್ರಾವಣವನ್ನು ರೋಬೋಟ್ ಮೂಲಕ ಸಿಂಪಡಿಸಲಾಗುತ್ತಿದೆ ಎಂದು ರೈತವಿಜ್ಞಾನಿಯಾದ ರೋಬೋ ಮಂಜೇಗೌಡ ವಿವರಿಸಿದರು.

ಸಾರ್ವಜನಿಕರು ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ತಡೆಯಲು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳನ್ನು ಆಗಾಗ್ಗೆ ಸ್ಯಾನಿಟೈಸರ್ ನಿಂದ ತೊಳೆದುಕೊಂಡು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಏಪ್ರಿಲ್ -೧೪ರವರೆಗೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕೈಮುಗಿದು ಮನವಿ ಮಾಡಿದರು.

error: