ಅವರು ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪುರಸಭೆಯ ಸದಸ್ಯರ ಸಭೆ ನಡೆಸಿ ಕೊರೋನಾ ವೈರಾಣುಗಳು ಹರಡದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು…
ಅನಗತ್ಯ ಓಡಾಟ ನಿಲ್ಲಿಸಿ. ಮನೆಯಲ್ಲಿರಿ…ಸಚಿವ ನಾರಾಯಣಗೌಡ ಮನವಿ ..
ಅನಗತ್ಯ ಓಡಾಟವನ್ನು ನಿಲ್ಲಿಸಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕದಂತೆ ನಿರ್ಬಂಧ ವಿಧಿಸಬೇಕು ಎಂದು ಮನವಿ ಮಾಡಿದ ಸಚಿವರು ಮಂಡ್ಯ ಜಿಲ್ಲೆಯಲ್ಲಿ ಈವರೆವಿಗೂ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ, ದೆಹಲಿ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದಿರುವವರ ಬಗ್ಗೆ ಎಚ್ಚರ ವಹಿಸಲಾಗಿದೆ..ಹೋಂ ಕ್ವಾರಂಟೈನ್ ನಲ್ಲಿರುವವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು..
ರಾತ್ರಿ 9 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ 9 ದೀಪಗಳನ್ನು ಬೆಳಗಿಸಿ ಕೊರೋನಾ ಮಹಾಮಾರಿಯು ದೀಪದ ಬೆಳಕಿನಲ್ಲಿ ಸಿಲುಕಿ ನಾಶವಾಗುವಂತೆ ಮಾಡಬೇಕು ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು …
ಇದೇ ಸಂದರ್ಭದಲ್ಲಿ ಬಿಸಿಎಂ ಇಲಾಖೆಯ ವತಿಯಿಂದ ಬಡ ಮಹಿಳೆಯರಿಗೆ ಸಚಿವರು ಸೀರೆಯನ್ನು ವಿತರಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯಗೌಡ, ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಸಮಾಜ ಸೇವಕ ಹೊಸಹೊಳಲು ಸೋಮಶೇಖರ್, ಪುರಸಭೆ ಸದಸ್ಯರಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಪ್ರಮೋದ್, ಗಿರೀಶ್, ನಂಜುಂಡ, ದಿನೇಶ್, ಕೆ.ಆರ್.ಹೇಮಂತ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು…
ಔಷಧಿ ಸಿಂಪರಣಾ ಯಂತ್ರಗಳ ವಿತರಣೆ …
ಉಧ್ಯಮಿ ಸೋಮಶೇಖರ್ ಅವರು ಶೇ.50ರಷ್ಟು ರಿಯಾಯಿತಿ ದರದಲ್ಲಿ ವಿತರಿಸಿದ ಔಷಧಿ ಸಿಂಪರಣೆ ಯಂತ್ರಗಳನ್ನು ಸಚಿವ ನಾರಾಯಣಗೌಡ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರಿಗೆ ವಿತರಿಸಿದರು. ಪುರಸಭೆಯ ಪೌರಕಾರ್ಮಿಕರಿಗೆ ಪುರಸಭೆ ವತಿಯಿಂದ ನೀಡಿದ ಸುರಕ್ಷಾ ಕಿಟ್ ಗಳನ್ನು ಸಚಿವ ಡಾ.ನಾರಾಯಣಗೌಡ ವಿತರಿಸಿದರು….
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ