May 4, 2024

Bhavana Tv

Its Your Channel

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅದ್ಯಕ್ಷರಾದ ಕೆ.ಬಿ ಶೇಖರ್ ಅಧ್ಯಕ್ಷತೆಯಲ್ಲಿ ನೆಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಭಿವೃದ್ಧಿ ವಿಚಾರವಾಗಿ ಯಾವುದೇ ರಾಜಕೀಯಾ ಮಾಡದೇ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು, ನಮ್ಮ ಸಹಕಾರ ಸಂಘವು ಈಗಾಗಲೇ ರಾಜ್ಯದಲ್ಲೇ ಮೂರನೇ ಸ್ಥಾನ ತುಂಬಿದೆ ನಮ್ಮಲ್ಲಿ ರಸ ಗೊಬ್ಬರ, ಹಾಡ್ವೇðರ್ ಬ್ಯಾಂಕ್, ಕ್ರಿಮಿನಾಷಕ ಔಷಧಗಳು, ಸಾವಯವ ಗೊಬ್ಬರ, ರೈತರ ಅನುಕೂಲಕ್ಕಾಗಿ ಟಾರ್ಪಲ್, ಪಶು ಆಹಾರ, ಆರ್ಟಿಸಿ, ಸೇರಿದಂತೆ ಹತ್ತಾರು ಯೋಜನೆಗಳನ್ನು ರೂಡಿಸಿಕೊಂಡಿದ್ದು ಸಂಘದ ಅಭಿವೃದ್ಧಿ ಯೋಜನೆಗಳನ್ನೂ ಕೈಗೊಂಡಿದೆ ಅಲ್ಲದೆ ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಬಹು ಮುಖ್ಯವಾಗಿದೆ.ಸಹಕಾರ ಸಂಘಗಳಲ್ಲಿ ಸಾಲ ಪಡೆದ ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಂಘ ಸಂಸ್ಥೆಗಳು ಉಳಿದು ಅಭಿವೃದ್ಧಿ ಕಾಣಲು ಸಾಧ್ಯ. ಕೃಷಿಕರಿಗೆ ಬಡ್ಡಿ ರಹಿತ ಸಾಲ ನೀಡುವ ಸಹಕಾರ ಸಂಘಗಳು ವ್ಯಾಪಾರ, ಕೃಷಿ, ಹೈನುಗಾರಿಕೆಯಂತಹ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವ ಜನತೆಗೆ ಅನುಕೂಲ ವಾಗುವುದು ಎಂದರು..

ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಬಿ ಶೇಖರ್, ಉಪಾಧ್ಯಕ್ಷರಾದ ಶ್ರೀನಾಥ್, ಸದಸ್ಯರಾದ ಕಾಯಿ ಸುರೇಶ್, ನಾರಾಯಣಸ್ವಾಮಿ, ಮುರುಳಿ, ಪಾಪಣ್ಣಗೌಡ, ಶಿವರಾಮೇಗೌಡ, ಮುರುಳಿ, ಮನು, ತಾರಾನಾಥ್, ಸ್ವಾಮಿ ನಾಯಕ್, ಭಾರತಿ ಪ್ರಕಾಶ್, ಕೋಮಲ ಪುಟ್ಟೇಗೌಡ, ಸಿಇಓ ಪುಟ್ಟರಾಜು, ಸಹ ಸಂಸ್ಥಾಪಕಿ ಭಾರತಿ.. ಸಿಬ್ಬಂದಿಯಾದ ಕೆ.ಎನ್ ಬಾಬು, ವೆಂಕಟೇಶ್, ನರಸಿಂಹ, ಸೇರಿಂದತೆ ನೂರಾರು ಶೇರುದಾರರ ಇದ್ದರು..

ವರದಿ: ಶಂಭು ಕಿಕ್ಕೇರಿ

error: