May 7, 2024

Bhavana Tv

Its Your Channel

ಕೆಂಪೇಗೌಡ ಸಂಘದ ವತಿಯಿಂದ ಕುವೆಂಪು ರವರ ಜನ್ಮದಿನ ಆಚರಣೆ

ಕಿಕ್ಕೇರಿ: ವಿಶ್ವಮಾನವ ಕುವೆಂಪು ರವರ ಜನ್ಮ ದಿನವನ್ನು ಕೆಂಪೇಗೌಡ ಸಂಘದ ವತಿಯಿಂದ ಕಿಕ್ಕೇರಿ ಪಟ್ಟಣ ಕುವೆಂಪು ಸರ್ಕಲ್ ನಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಗಣ್ಯರುಗಳು ಕುವೆಂಪು ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಪೂಜೆ ಸಲ್ಲಿಸಿದರು..

ನಂತರ ನಿವೃತ್ತ ಪ್ರಾಂಶುಪಾಲರಾದ ಚಂದ್ರಮೋಹನ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ. ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ ಈ ಒಂದೊAದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ. ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು ಕುವೆಂಪು ರವರು ಇಂತಹ ಮಹಾನಿಯ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಕೆಂಪೇಗೌಡರ ಸಂಘಕ್ಕೆ ಶಕ್ತಿ ದೊರಕಲಿ ಎಂದರು…

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್,ಮನ್ ಮುಲ್ ನಿರ್ದೇಶಕ ಕೆ.ಜಿ ತಮ್ಮಣ್ಣ, ಜೆ.ಡಿ.ಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ ಶೇಖರ್, ಗ್ರಾಮ ತಾಲ್ಲೂಕು ಪಂಚಾಯಿ ಮಾಜಿ ಸದಸ್ಯ ಶಾರದಮ್ಮ ಕೃಷ್ಷೇಗೌಡ್ರು, ಗ್ರಾಮ ಪಂಚಾಯಿತಿ ಅದ್ಯಕ್ಷ ಗಂಗೇನಹಳ್ಳಿ ರಘು, ಸಮಾಜ ಸೇವಕ ಮೊಟ್ಟೆ ಮಂಜು, ಜಾನೇಗೌಡ್ರು, ಧರ್ಮಪ್ಪ, ವಿನೋಧ್ ಸಿಂಗ್, ಕುಮಾರಸ್ವಾಮಿ, ತಾರನಾಥ್, ಏಜೇಸ್ ಪಾಷ, ಶಿವರಾಮೇಗೌಡ್ರು, ಮಧು, ಸತ್ಯ, ಡೈರಿ ಕೃಷ್ಣ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರು, ನೂರಾರು ಗಣ್ಯರು ಇದ್ದರು..

ವರದಿ ಶಂಭು ಕಿಕ್ಕೇರಿ

error: