December 22, 2024

Bhavana Tv

Its Your Channel

ಏ.22ಕ್ಕೆ ಗಂಡುಲಿ ಚಲನ ಚಿತ್ರ ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ

ಕಿಕ್ಕೇರಿ: ಗಂಡುಲಿ ಕನ್ನಡ ಚಲನ ಚಿತ್ರವು ಇದೇ ತಿಂಗಳು 22 ರಂದು ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಖಳನಾಯಕ ಸುಬ್ಬೇಗೌಡ್ರು ತಿಳಿಸಿದರು

ಕೃಷ್ಣರಾಜಪೇಟೆಯ ಹೇಮಗಿರಿ, ಮಂದಗೆರೆ, ಕಿಕ್ಕೇರಿ, ಸುತ್ತಾ ಮುತ್ತಾ ಚಿತ್ರೀಕರಣ ಮಾಡಿರುವ ಗಂಡುಲಿ ಎಂಬ ಚಲನಚಿತ್ರದಲ್ಲಿ ನಾಯಕ ನಟನಾಗಿ ವಿನಯ್ ರತ್ನಸಿದ್ದಿ ರವರು ಅಭಿನಯಸಿದ್ದು ಖಳನಾಯಕನಾಗಿ ಮೊದಲ ಬಾರಿಗೆ ಕಿಕ್ಕೇರಿ ಹೋಬಳಿಯ ವಡ್ಡರಹಳ್ಳಿ ಗ್ರಾಮದ ಸುಬ್ಬೇಗೌಡ್ರು ನಟನೆ ಮಾಡಿದ್ದು ಅಲ್ಲದೆ ಈ ಚಿತ್ರಕ್ಕಾಗಿ ನೂರಾರು ಕಲಾವಿದರು ಶ್ರಮಸಿದ್ದು ಕೃಷ್ಣರಾಜಪೇಟೆ ಪಟ್ಟಣದ ಕೆ.ಜಿ.ಬಿ ಚಿತ್ರಮಂದಿರ ಸೇರಿದಂತೆ ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 22 ರಂದು ಬಿಡುಗಡೆಯಾಲಿದ್ದು ಇದು ಒಂದು ಗ್ರಾಮೀಣ ಭಾಗದ ಕಥೆಯನ್ನು ಆದರಿಸಿ ಶ್ರೀಮಂತ ವ್ಯಕ್ತಿಗಳಿಂದ ಬಡಜನರಿಗೆ ಆಗುವ ಅನ್ಯಾಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ ಎಲ್ಲಾರೂ ಚಿತ್ರವನ್ನು ವೀಕ್ಷಿಸಿ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಮಾಧ್ಯಮ ಮೂಲಕ ಮನವಿ ಮಾಡಿದರು..

ಚಿತ್ರೀಕರಣದ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್ ಪ್ರಭಾಕರ್ ಸೇರಿದಂತೆ ಹಲವರು ನಮ್ಮಗೆ ಸಹಕಾರ ನೀಡಿದ್ದು ಎಲ್ಲಾರಿಗೂ ಖಳನಾಯಕ ಸುಬ್ಬೇಗೌಡ್ರು ಹೃದಯ ಸ್ಪರ್ಶಿ ಧನ್ಯವಾದಗಳನ್ನು ತಿಳಿಸಿದರು

ವರದಿ ಶಂಭು ಕಿಕ್ಕೇರಿ

error: