December 19, 2024

Bhavana Tv

Its Your Channel

ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

ಳವಳ್ಳಿ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಪ್ರಾಂತ್ಯ 9 ವಲಯ-1 ಜಿಲ್ಲೆ 317 ಎ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಹಾಗೂ ಸೇವಾ ಕಾರ್ಯಕ್ರಮ ಭಾನುವಾರ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯಪಾಲರಾದ ಡಾ ಲಯನ್ ಪ್ರಭಾಮೂರ್ತಿ ಲಯನ್ಸ್ ಅಂದರೆ ಸೇವೆ ಸೇವಾಮನೋಭಾವ ಇಟ್ಟುಕೊಂಡು ನಾವುಗಳು ಕೆಲಸ ಮಾಡುತ್ತಿದ್ದೇವೆ ಅದರಂತೆ ಮಂಡ್ಯ ಅಮೃತ ಲಯನ್ಸ್ ಸಂಸ್ಥೆಯು ಕೇವಲ ನಾಲ್ಕು ತಿಂಗಳುಗಳಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಸೇವಾಕಾರ್ಯಗಳ ಚಟುವಟಿಕೆಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ.ಲಯನ್ಸ್ ಸಂಸ್ಥೆಯಲ್ಲಿ ಸೇವೆಯೇ ಬಹಳ ಮುಖ್ಯವಾಗಿರುವುದು ಹಾಗಾಗಿ ನಮ್ಮ ಅವಧಿಯಲ್ಲಿ ಅಮೃತ ಲಯನ್ಸ್ ಕಾರ್ಯಚಟುವಟಿಕೆಗಳಲ್ಲಿ ಬಹಳ ಮುಂಚೂಣಿಯಲ್ಲಿದ್ದು ಇನ್ನಷ್ಟು ಲಯನ್ಸ್ ಸಂಸ್ಥೆಗಳನ್ನು ಮತ್ತು ಜನರನ್ನು ಸೇರಿಸಬೇಕು ಎಂದು ಸಲಹೆ ನೀಡಿದರು ಈಗಾಗಲೇ ಸಾಕಷ್ಟು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಿದೆ ದೊಡ್ಡ ಮಟ್ಟದಲ್ಲಿ ಐ ಕ್ಯಾಂಪ್ ಮತ್ತು ಉಚಿತ ಹೊಲಿಗೆ ತರಬೇತಿ ಕೇಂದ್ರಗಳು ಪ್ರಾರಂಭಸಿ ಎಂದು ಸಲಹೆ ನೀಡಿದರು ಅಮೃತ ಲಯನ್ಸ್ ಬಗ್ಗೆ ಪ್ರಶಂಸಿಸಿ ಅಮೃತ ಲಯನ್ಸ್ ಸಂಸ್ಥೆಗೆ ಅಂತರಾಷ್ಟ್ರೀಯ ಕಾರ್ಯಕ್ರಮದ ಅಚೆವಿಮೆಂಟ್ ಪ್ರಮಾಣ ನೀಡಿದರು ಕಾರ್ಯಕ್ರಮದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು ನಂತರ ಲಯನ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಸುಂದರಮೂರ್ತಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮತ್ತು ಸಂಸ್ಥೆಯು ಈಗಾಗಲೇ ಸಾಕಷ್ಟು ಉತ್ತಮವಾದ ಕೆಲಸವನ್ನು ಮಾಡಿದೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಖಜಾಂಚಿ ಶ್ರೀನಿವಾಸ್ ಮಾತನಾಡಿದರು ಇದೇ ಸಂದರ್ಭದಲ್ಲಿ ಅಮೃತ ಲಯನ್ಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವರದಿಯನ್ನು ಸಭೆಗೆ ಮಂಡಿಸಲಾಯಿತು ಅಧ್ಯಕ್ಷತೆಯನ್ನು ಅಮೃತ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಲೋಕೇಶ್ ವಹಿಸಿದ್ದರು ಲಯನ್ ಬೋರೇಗೌಡ ಮತ್ತು ವೃದ್ಧಾಶ್ರಮದ ಸಿಬ್ಬಂದಿಯವರು ಆಶ್ರಮವಾಸಿಗಳು ಹಾಜರಿದ್ದರು ನಂತರ ಸೇವಾ ಕಾರ್ಯಕ್ರಮದ ಅಂಗವಾಗಿ ವೃದ್ಧರಿಗೆ ಹಣ್ಣುಹಂಪಲು ವಿತರಿಸಲಾಯಿತು

ವರದಿ: ಲೋಕೇಶ ಮಳವಳ್ಳಿ

error: