ಕೃಷ್ಣರಾಜಪೇಟೆ ತಾಲ್ಲೂಕಿನ ಚಿಕ್ಕತರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಕೆರೆ ಕೋಡಿಮಾರಮ್ಮದೇವಿಯ ದೇವಾಸ್ಥಾನದ ಉದ್ಘಾಟನೆ ಕಾರ್ಯಕ್ರಮವು ದಿನಾಂಕ ಮೇ ೪,೫,೬ ರಂದು ನಡೆಯಲಿದೆ ಎಂದು ಗ್ರಾಮದ ಮುಖಂಡರಾದ ಪರ್ವತರಾಜು ತಿಳಿಸಿದ್ರು.
ಧಾನಿಗಳ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಕೊಂಡಿರುವ ದೇವಾಲಯ ಉದ್ಘಾಟನೆ, ಕುಂಬಾಭಿಷೇಕ ಹಾಗೂ ವಿಗ್ರಹ ಪ್ರತಿಷ್ಠಾಪನೆ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀಗಳು, ಹಾಸನ ಮಠದ ಶ್ರೀ ಶ್ರೀ ಶಂಭುನಾಥ ಸ್ವಾಮಿಜೀಗಳು, ಹಾಗೂ ಹೇಮಗಿರಿ ಬಿ.ಜಿ.ಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಜೆ.ಎನ್ ರಾಮಕೃಷ್ಣೇಗೌಡ್ರು, ಜಯದೇವ ಆಸ್ಪತ್ರೆಯ ಸಿ.ಎನ್ ಮಂಜುನಾಥ್ ಹಾಗು ಅನುಸೂಯ ಮಂಜುನಾಥ್, ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಹಾಲಿ ಶಾಸಕರು ಹೆಚ್ ಡಿ ರೇವಣ್ಣ, ಮಂಡ್ಯ ಉಸ್ತುವಾರಿ ಸಚಿವಾರದ ಗೋಪಾಲಯ್ಯ, ಕ್ರೀಡೆ, ರೇಷ್ಮೆ ಮತ್ತು ಯುವ ಸಬಲೀಕರಣ ಸಚಿವರಾದ. ಕೆ ಸಿ ನಾರಾಯಣಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ, ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್, ಜಿಲ್ಲಾ ಪಂಚಾಯತಿ ಮಾಜಿ ನಿರ್ದೇಶಕರಾದ ಪುಟ್ಟಸ್ವಾಮಿಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ, ಸೇರಿದಂತೆ ನೂರಾರು ಗಣ್ಯರು ಭಾಗವಹಿಸಲಿದ್ದು ತಾಲ್ಲೂಕಿನ ಎಲ್ಲಾ ಭಕ್ತರು ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿ ಮಾಡಿಕೊಡಬೇಕೆಂದು ತಿಳಿಸಿದರು..
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಕ್ಕತರಹಳ್ಳಿ ಮಧು, ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ್ (ರಾಜು) ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಸಿ.ಬಿ ರಂಗಸ್ವಾಮಿ, ಧರ್ಮರಾಜು, ಸಿಡಿ ಮಂಜೇಗೌಡ್ರು, ಕಾಯಿ ಮಂಜು , ಸಿ.ಎನ್ ಪ್ರಕಾಶ್, ಸಿ.ಎಣ್ ಪ್ರಕಾಶ್, ಶಿವಲಿಂಗೇಗೌಡ, ಸಿ.ಸಿ ರಾಮ, ಆಟೋ ಮಂಜು ಮತ್ತಿತ್ತರರು ಇದ್ದರು..
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ