December 22, 2024

Bhavana Tv

Its Your Channel

ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ

ಕಿಕ್ಕೇರಿ:- ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕ ಹಾಗೂ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ರವರಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹೃದಯ ಸ್ಪರ್ಶಿ ಸನ್ಮಾನಿಸಲಾಯಿತು

ಕೃಷ್ಣರಾಜಪೇ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಜೆ.ಡಿ.ಎಸ್ ಕಛೇರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತಿ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ಅರಿಶಿಣ ಕುಂಕುಮ, ಬಳೆ, ಹಾಗೂ ಪುರಷ ಕಾರ್ಮಿಕರಿಗೆ ಸಮವಸ್ತ್ರ ಪಾದರಕ್ಷೆ,ಸಿಹಿ ವಿತರಿಸಿ ಸನ್ಮಾನಿಸಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ಮಾತನಾಡಿ ವಿಶ್ವವೇ ಕರೋನಾ ಯಿಂದ ತತ್ತರಿಸಿದ ಸಂದರ್ಭದಲ್ಲೂ ಸಹ ಜೀವದ ಹಂಗು ತೊರೆದು ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ ಇಂತಹ ಪೌರ ಕಾರ್ಮಿಕರಿಗೆ ನಮ್ಮ ಕೈಲಾದ ಸೇವೆ ಮಾಡಿರುವೇ ಎಂದರು.

ಕಾರ್ಯಕ್ರಮ ಕುರಿತು ಮಾತನಾಡಿದ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ ಈ ಭಾಗದ ಬಡ ಜನರ ಮನೆ ಮಾತಾಗಿರುವ ಬಿ ಎಂ ಕಿರಣ್ ರವರ ಸಮಾಜಮುಖಿ ಕಾರ್ಯಕ್ರಮಗಳು ವಿಶೇಷತೆಯಿಂದ ಕೂಡಿರುತ್ತದೆ ಅದರಂತೆ ಆರೋಗ್ಯವಂತ ಸಮಾಜಕ್ಕಾಗಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುವ ಪೌರಕಾರ್ಮಿಕರಿಗೆ ಹಾಗೂ ಆ ದಿನ ದುಡಿದು ಜೀವಿಸುವ ದಿನಗೂಲಿ ನೌಕರರಿಗೆ ಗೌರವಿಸುವ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಿಕ್ಕೇರಿ ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ, ದೇವರಾಜು, ಅರುಣ್ ಕುಮಾರ್, ಬಬ್ರುವಾಹನ ಮುಖಂಡರಾದ ಹೋಟೆಲ್ ಪುಟ್ಟರಾಜು, ನಟರಾಜು, ಮಂಜು, ಲೋಕೇಶ್ ಸೇರಿದಂತೆ ನೂರಾರು ಜನರು ಇದ್ದರು

ವರದಿ :-ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: