December 22, 2024

Bhavana Tv

Its Your Channel

ಮೇ 19 ರಿಂದ ಮಧ್ಯವರ್ಜನ ಶಿಬಿರ

ಕಿಕ್ಕೇರಿ:-ಮಧ್ಯಪಾನದಿಂದ ಕುಟುಂಬ ದೇಶ ಎಲ್ಲವನ್ನು ಸರ್ವನಾಶ ಮಾಡುವ ದೊಡ್ಡ ಪಿಡುಗಾಗಿದ್ದು ಇದರಿಂದ ಕುಡಿತ ಮುಕ್ತ ಸಮಾಜ ನಿರ್ಮಿಸಿಸಲು ಸಮುದಾಯದ ಸಹಕಾರ ಅವಶ್ಯಕತೆವಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಶಾಲ್ ತಿಳಿಸಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕುರುವಿನ ಶೆಟ್ಟಿ ಸಮುದಾಯ ಭವನದಲ್ಲಿ ಮೇ 19 ರಿಂದ ಮಧ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ಮೊದಲಿಗೆ 75 ಮಧ್ಯಸೇವಕರನ್ನು ಶಿಬಿರಕ್ಕೆ ದಾಖಲಿಸಿ ಮಧ್ಯಮುಕ್ತ ಗ್ರಾಮಗಳ್ಳನ್ನಾಗಿ ಮಾಡುವುದೇ ನಮ್ಮ ಗುರಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಗಳಲ್ಲಿ ದಾನಿಗಳು ಮುಖಂಡರುಗಳು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿ ಮಾಡಿಕೊಡಬೇಕೆಂದು ತಿಳಿಸಿದರು..

ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ವೀರೇಶಪ್ಪ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಿತಾ, ಮದ್ಯವರ್ಜನ ಶಿಬಿರದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾದ್ಯಕ್ಷ ಸ್ಟೂಡಿಯೋ ಕುಮಾರ್, ಸಮಾಜ ಸೇವಕ ಮೊಟ್ಟೆ ಮಂಜು, ಮೇಲ್ವಿಚಾರಕಿ ರೇಣುಕ, ಪ್ರತಿನಿಧಿಗಳಾದ ಇಂದೀರಾ, ಶಿಲ್ಪ, ಪುಷ್ಪಲತಾ ಸೇರಿದಂತೆ ಮತ್ತಿತ್ತರರು ಇದ್ದರು..

ವರದಿ:ಶಂಭು ಕಿಕ್ಕೇರಿ

error: