December 22, 2024

Bhavana Tv

Its Your Channel

ಲೋಕಾಯನ ಕಲ್ಚರಲ್ ಫೌಂಡೇಶನ್ 13ನೇ ವರ್ಷದ ಸಮಾರೋಪ ಸಮಾರಂಭ

ಕಿಕ್ಕೇರಿ:ಯುವಕರು ಗ್ರಾಮೀಣ ಕಲೆಗಳನ್ನು ಕಲಿಯಬೇಕು ಹಾಗೂ ನಮ್ಮ ಜನಪದ ಕಲೆಗಳನ್ನು ಉಳಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಪದ್ಮಾಶೇಖರ್ ಅವರು ಕರೆ ನೀಡಿದರು.

ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಜಯಶ್ರೀ ರಂಗಮAದಿರದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಶನ್ 13ನೇ ವರ್ಷದ ಸಮಾರೋಪ ಸಮಾರಂಭವನ್ನು ನಗಾರಿ ಹೊಡೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಲೋಕಾಯನ ಕಲ್ಚರಲ್ ಫೌಂಡೇಶನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಯುವಕರು ಮತ್ತು ಮಕ್ಕಳು ಜನಪದ ಕಲೆಗಳನ್ನು ಕಲಿಯಬೇಕು, ಈ ಕಲೆಗಳನ್ನು ಭವಿಷ್ಯಕ್ಕೆ ಕೊಡುಗೆಯಾಗಿ ನೀಡಬೇಕು. ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಯಾಗಬೇಕು ಹೊರತು ಭತ್ತ ತುಂಬುವ ಕಣಜ ಆಗಬಾರದೆಂದು ವಿಧ್ಯಾರ್ಥಿಗಳಿಗೆ ಕಿವಿ ಮಾಡು ಹೇಳಿದರು.

ನಂತರ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅಂಚಿ ಸಣ್ಣಸ್ವಾಮಿಗೌಡರು ಈಗಿನ ಯುವಕರು ಮೊಬೈಲ್ ಎಂಬ ಪ್ರಪಂಚದಲ್ಲಿ ಮುಳುಗಿಹೋಗಿದ್ದಾರೆ. ಮೊಬೈಲ್ ಗಳನ್ನು ಮರೆತು ಗ್ರಾಮೀಣ ಪ್ರದೇಶದ ಕಲೆಗಳನ್ನು ಕಲಿಯಬೇಕು ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ನಾವು ಉಳಿಸಬೇಕು. ಕಲೆ ಮತ್ತು ಸಾಹಿತ್ಯಕ್ಕೆ ಅಕ್ಕಿಹೆಬ್ಬಾಳು ತುಂಬಾ ಪ್ರಸಿದ್ಧಿ ಪಡೆದಿದೆ. ಈ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಯುವಕರಿಗೆ ಕಿವಿಮಾತುಗಳನ್ನು ಹೇಳಿದರು..

ಲೋಕಾಯನದ ಮುಖ್ಯಸ್ಥರಾದ ಶಶಿಧರ್ ಭಾರಿಘಾಟ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕ್ಕಿಹೆಬ್ಬಾಳು ಮೂಡಲಪಾಯ ಯಕ್ಷಗಾನದ ಬಗ್ಗೆ ಪ್ರಥಮ ದರ್ಜೆ ಗುತ್ತಿಗೆದಾರರಾದ ಎ.ಆರ್.ರಘುರವರು ಮಾತನಾಡಿದರು. ಈ ಬೇಸಿಗೆ ಶಿಬಿರಕ್ಕೆ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ನಾಣಿ ಭಟ್ಟನ ಸ್ವರ್ಗನ ಕನಸು ಮತ್ತು ಒಳಿತು ಮಾಡು ಮನಸ್ಸು ಎಂಬ ಎರಡು ನಾಟಕಗಳು ಪ್ರದರ್ಶನವಾದವು. ಪುಟಾಣಿಗಳು ನೃತ್ಯ ಮತ್ತು ಮುಖಾಭಿನಯವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಕ್ಷಿತ್ ದಿನೇಶ್, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಾಸು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಎ.ಜೆ ಕುಮಾರ್, ಶ್ರೀಧರ್ ಭಾರಿಘಾಟ್, ಎ.ಆರ್.ರಮೇಶ್, ಶಕುಂತಲ ಹೆಗಡೆ, ಜೀವನ್ ಕುಮಾರ್ ಹೆಗ್ಗೋಡು, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್, ಗಗನ್ ಜಿ ಸೇರಿದ ಹಾಗೆ ಗ್ರಾಮಸ್ಥರು ಹಾಜರಿದ್ದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: