April 18, 2025

Bhavana Tv

Its Your Channel

ಭಾರಿ ಮಳೆಗೆ ಕೊಚ್ಚಿಹೋದ ರಸ್ತೆಯನ್ನು ಸರಿ ಪಡಿಸಲು ಮುಂದಾದ ಲಕ್ಷ್ಮೀಪುರ ಗ್ರಾ.ಪಂ ಸದಸ್ಯ ಮಾದಿಹಳ್ಳಿ ಶ್ರೀಧರ್, ಮತ್ತು ಗ್ರಾಮದ ಮುಖಂಡರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ, ಕಳ್ಳನಕೆರೆ, ಡಿಂಕಾ, ಹೊನ್ನೇನಹಳ್ಳಿ ಗ್ರಾಮಗಳ ಸಂಪರ್ಕ ಇರುವ ರಸ್ತೆಯು ಕಳೆದ ಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಕೊಚ್ಚಿಹೋಗಿದ್ದು ಗ್ರಾಮಗಳಿಗೆ ಹೋಗಲು ಹರ ಸಾಸಹ ಪಡಬೇಕಾಗಿತ್ತು..

ಇದರ ಬಗ್ಗೆ ಸಂಬAಧಪಟ್ಟ ಎಲ್ಲಾ ಅಧಿಕಾರಿಗಳು, ಜನಪ್ರತಿಗಳ ಗಮನಕ್ಕೆ ತಂದರೂ ಸ್ಥಳಕೆ ಭೇಟಿ ನೀಡಿ ನಾನಾ ಕಾರಣಗಳನು ಹೇಳಿಕೊಂಡು ತಳ್ಳು ಹಾಕುತ್ತಿದ್ದರು.

ಇದನ್ನು ತಿಳಿದ ಗ್ರಾಮ ಪಂಚಾಯತಿ ಸದಸ್ಯ ಶ್ರೀಧರ್ ನೇತೃತ್ವದಲ್ಲಿ ಸ್ವಂತ ಹಣ ಖರ್ಚು ಮಾಡಿ ಗ್ರಾಮಸ್ಥರ ಸಹಾಯದೊಂದಿಗೆ ತಾತ್ಕಾಲಿಕ ರಸ್ತೆ ಪಡಿಸಲು ಮಂದಾಗಿದ್ದು ಇದರಿಂದ ಗ್ರಾಮಸ್ಥರಲ್ಲಿ ಮೊಗದಲ್ಲಿ ಸಂತಸ ತಂದಿದೆ..

ನAತ ಮಾಧ್ಯಮದೊಂದಿಗೆ ಗ್ರಾಮಸ್ಥರುಗಳು ಮಾತನಾಡಿ ನಮ್ಮ ಗ್ರಾಮದಿಂದ ಕಿಕ್ಕೇರಿ ಪಟ್ಟಣಕ್ಕೆ ಈ ರಸ್ತೆ ಮೂಲಕ ನೂರಾರು ಸಾರ್ವಜನಿಕರು ದಿನನಿತ್ಯ ಓಡಾಡುತ್ತಿದ್ದು ಶಾಲಾ ಮಕ್ಕಳು ಶಾಲಾ ವಾಹನಗಳಿಗೆ, ಬೈಕ್ ಸವಾರರಿಗೆ ಬಾರಿ ತೊಂದರೆ ಎದುರಾಗಿತ್ತು ಆದರೆ ನಮ್ಮ ಗ್ರಾಮದಿಂದ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯ ಶ್ರೀಧರ್ ರವರು ಇಂದು ತಮ್ಮ ಸ್ವಂತ ಹಣ ಖರ್ಚು ಮಾಡಿ ರಸ್ತೆ ಸರಿ ಪಡಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು..

ಈಗಲಾದರು ಸಂಬAಧ ಪಟ್ಟ ಅಧಿಕಾರಿಗಳು ,ಜನ ಪತ್ರಿನಿದಿಗಳು ರಸ್ತೆಯನ್ನು ಸರಿಪಡಿಸುವಂತೆ ಸಾರ್ವನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶ್ರೀಧರ್, ಗ್ರಾಮದ ಮುಖಂಡರಾದ ಸತೀಶ್, ಪ್ರಶಾಂತ್, ಬಾಲರಾಜು, ನಾಗೇಗೌಡ್ರು, ಲಕ್ಷ್ಮೇಗೌಡ್ರು ಚಂದ್ರಶೇಖರ್, ಶಂಕರ್, ಯೋಗೇಶ್, ಸೇರಿದಂತೆ ನೂರಾರು ಜನರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: