April 10, 2025

Bhavana Tv

Its Your Channel

ತಾನು ಬೆಳೆದ ಬೆಳೆಯಲ್ಲೇ ಎಣ್ಣೆ ತಯಾರು ಮಾಡಿ ಅಭಿವೃದ್ಧಿ ಕೈಗೊಂಡ ಯುವ ರೈತ ಪಾಂಡು

ಕಿಕ್ಕೇರಿ: ಪಾಂಡು ಎಂಬ ಯುವ ರೈತನೊಬ್ಬ ಕಳೆದ ಮೂರು ವರ್ಷಗಳಿಂದ ಕಡಲ್ಲೇ ಬೀಜ, ಸೂರ್ಯಕಾಂತಿ ಬೆಳೆಗಳನ್ನು ತಾವೇ ಸ್ವತಃ ಬೆಳೆದ ಬೆಳೆಯಲ್ಲಿ ಎಣ್ಣೆ ತಯಾರು ಮಾಡಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು ಈಗಿನ ಯುವ ಪೀಳಿಗಿಗೆ ಮಾದರಿಯಾಗಿದ್ದಾರೆ..

ಮೂಲತಃ ಈತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಶ್ರೀಮತಿ ಯಶೋದಮ್ಮ ಮಂಜೇಗೌಡರ ಪುತ್ರನಾದ ಪಾಂಡು ಎಂಬಾತ ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾಭ್ಯಾಸದ ಜೊತೆ ರೈತನಾಗಿ ಏನಾದರೂ ಸಾಧನೇ ಮಾಡಬೇಕು ಎಂದು ಕನಸು
ಕಂಡು ಅದೇ ರೀತಿ ತಮ್ಮ ತಂದೆ ಉಳಿಸಿಕೊಂಡ ಐದು ಎಕ್ಕರೆ ಜಮೀನಿನಲ್ಲೇ ಏನಾದರೂ ಸಾಧನೆ ಮಾಡಬೇಕು ಎಲ್ಲರಂತೆ ಬದುಕಬೇಕು ಎಂದು ಕನಸು ಕಂಡವನು..

ತಮ್ಮಗಿದ್ದ ಸಲ್ಪ ಅನುಭದಲ್ಲಿ ಕಿಕ್ಕೇರಿ ಪಟ್ಟಣದ ಮಂದಗೆರೆ ರಸ್ತೆಯ ಎಸ್.ಬಿ.ಐ ಬ್ಯಾಂಕ್ ಎದುರು ಒಂದು ಚಿಕ್ಕ ಅಂಗಡಿಯನ್ನು ಬಾಡಿಗೆ ಪಡೆದು ಎಣ್ಣೆ ತಯಾರು ಮಾಡುವ ಯಂತ್ರವನ್ನು ಅಳವಡಿಕೆ ಮಾಡಿಕೊಂಡು ಎಣ್ಣೆ ತಯಾರು ಮಾಡುತ್ತಾ ಬಂದರು

ಮೊದಲಿಗೆ ಮಾರುಕಟ್ಟೆಯಿಂದ ಸೂರ್ಯಕಾಂತಿ ಬೀಜ, ಕಡಲೆ ಬೀಜ, ಕೊಬ್ಬರಿ, ಸಸಾವೆ, ಹುಚ್ಚಳ್ಳು, ಬಾದಾಮಿ, ಎಳ್ಳು, ಕುಸುವೆ ಬೀಜಗಳನ್ನು ಖರೀದಿ ಮಾಡಿ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾ ಇದ್ದರು.. ಆದರೆ ಮಾರುಕಟ್ಟೆಯಲ್ಲಿ ಹೆಚ್ಚು ದರ ಇದ್ದಕಾರಣ ಇದನ್ನು ಅರಿತ ಪಾಂಡು ರವರು ತಾವೇ ಸ್ವತಃ ಸೂರ್ಯಕಾಂತಿ, ಕಡಲೇ ಯನ್ನು ಬೆಳೆದು ತಾವೇ ಎಣ್ಣೆ ತಯಾರು ಮಾಡಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ..

ಅಲ್ಲದೆ ರೈತರು ನೇರವಾಗಿ ಕೊಬ್ಬರಿ, ಕಡಲೆ ಬೀಜಗಳನ್ನು ತಂದು ಕೊಟ್ಟು ಇಲ್ಲೇ ಇದ್ದು ಎಣ್ಣೆ ಮಾಡಿಸಿಕೊಂಡು ಹೋಗುವುರು ಉಂಟು..

ಒಟ್ಟಾರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಎಣ್ಣೆಯನ್ನು ಬಳಸದೆ ಈ ಎಣ್ಣೆಯನ್ನು ಉಪಯೋಗಿಸುವುದರಿಂದ ತಮ್ಮ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ನುರಿತವರು ಹೇಳುತ್ತಾರೆ…

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದರೆ ಯುವ ರೈತ ಪಾಂಡು ರವರನ್ನು ಸಂಪರ್ಕ ಮಾಡಬಹುದು ದೂರವಾಣಿ ಸಂಖ್ಯೆ 9113030952-9741210723.

ವಿಶೇಷ ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: