April 4, 2025

Bhavana Tv

Its Your Channel

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ಸಿಎ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿಕೊಡುವಂತೆ ಮಾಜಿ ಸೈನಿಕರ ಸಂಘಟನೆಯಿOದ ಮನವಿ.

ಮಂಡ್ಯ: ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ಸಿಎ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿಕೊಡುವಂತೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು ಅವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಪ್ರವಾಸಿ ಮಂದಿರದಲ್ಲಿ ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡರಿಗೆ ಮನವಿ ಸಲ್ಲಿಸಿದರು. ನಗರಾಭಿವೃದ್ಧಿ ಪ್ರಾಧಿಕಾರವು ಸಿಎ ನಿವೇಶನವನ್ನು ೫೬ಲಕ್ಷರೂಗಳಿಗೆ ಮಾಜಿಸೈನಿಕರ ಕಲ್ಯಾಣ ಸಂಘಕ್ಕೆ ಈಗಾಗಲೇ ಮಂಜೂರು ಮಾಡಿದೆ. ಮಾಜಿಸೈನಿಕರಾದ ನಾವುಗಳು ೫ಲಕ್ಷರೂ ಹಣವನ್ನು ಪಾವತಿಸಿದ್ದು, ಉಳಿದ ಬಾಕಿ ಹಣವನ್ನು ಕಟ್ಟಲು ಅಶಕ್ತರಾಗಿದ್ದೇವೆ. ಆದ್ದರಿಂದ ನಾವು ಕಟ್ಟಬೇಕಾಗಿರುವ ಉಳಿಕೆ ಹಣವನ್ನು ಮನ್ನಾ ಮಾಡಿಸಿಕೊಟ್ಟು ಉಚಿತವಾಗಿ ನಿವೇಶನವನ್ನು ಮಂಜೂರು ಮಾಡಿಸಿಕೊಡಬೇಕು ಎಂದು ಮಾಜಿ ಸೈನಿಕರು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಸದಸ್ಯ ಅಘಲಯ ಮಂಜುನಾಥ್, ಸಿಂದ್‌ರಾಜು ಮಾಜಿಸೈನಿಕರ ಮಂಡ್ಯ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಸಿಪಾಯಿ ಶ್ರೀನಿವಾಸ್, ಎಂ.ಆರ್.ಶ್ರೀನಿವಾಸ್, ರಾಜಣ್ಣ, ರಮೇಶ್, ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .

error: